ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದ ಮೊದಲ ದಿನ ಭಾರತೀಯ ಬ್ಯಾಟ್ಸ್‌ಮನ್‌ಗಳು ಸೆಂಚುರಿ ಮೂಲಕ ಅಬ್ಬರಿಸುತ್ತಿದ್ದಾರೆ. ಶಿಖರ್ ಧವನ್ ಬಳಿಕ ಇದೀಗ ಮತೊರ್ವ ಕ್ರಿಕೆಟಿಗ ಸೆಂಚುರಿ ದಾಖಲಿಸಿದ್ದಾರೆ.
ಬೆಂಗಳೂರು(ಜೂನ್.14): ಅಫ್ಘಾನಿಸ್ತಾನ ವಿರುದ್ಧಧ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತದ ಶಿಖರ್ ಧವನ್ ಶತಕ ಸಿಡಿಸಿದ ಬೆನ್ನಲ್ಲೇ, ಮತ್ತೊರ್ವ ಆರಂಭಿಕ ಮುರಳಿ ವಿಜಯ್ ಸೆಂಚುರಿ ದಾಖಲಿಸಿ ಸಂಭ್ರಮಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತದ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಧವನ್ ಔಟಾದ ಬಳಿಕ, ಇದೀಗ ಮುರಳಿ ವಿಜಯ್ ಭರ್ಜರಿ ಶತಕ ದಾಖಲಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಶತಕ ದಾಖಲಿಸಿದ್ದಾರೆ.
ವಿಜಯ್ 94 ರನ್ ಸಿಡಿಸಿ ಶತಕದತ್ತ ಮುನ್ನಗ್ಗುತ್ತಿದ್ದ ವೇಳೆ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಮತ್ತೆ 99 ರನ್ ಸಿಡಿಸಿ ಇನ್ನೇನು ಶತಕ ದಾಖಲಿಸದರು ಅನ್ನುವಷ್ಟರಲ್ಲೇ ಮತ್ತೆ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಇದೀಗ ವಿಜಯ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ.
