ಸಿಎಸ್'ಕೆ ಧೋನಿ ಹಾಗೂ ಸುರೇಶ್ ರೈನಾ ಅವರನ್ನು ಉಳಿಸಿಕೊಳ್ಳುವ ಇರಾದೆಯಲ್ಲಿದ್ದರೆ, ಹೈದರಾಬಾದ್ ಡೇವಿಡ್ ವಾರ್ನರ್ ಹಾಗೂ ಯುವ ಪ್ರತಿಭೆ ದೀಪಕ್ ಹೂಡಾ ಅವರ ಮೇಲೆ ಕಣ್ಣಿಟ್ಟಿದೆ ಎನ್ನಲಾಗಿದೆ. ಐಪಿಎಲ್ ಹರಾಜು ಪ್ರಕ್ರಿಯೆಯು ಬೆಂಗಳೂರಿನಲ್ಲಿ ಜನವರಿ 27&28ರಂದು ನಡೆಯಲಿದೆ
ನವದೆಹಲಿ(ಜ.03): ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 2018ರ ಐಪಿಎಲ್'ಗೆ ನಾಯಕ ರೋಹಿತ್ ಶರ್ಮಾ ಹಾಗೂ ಪಾಂಡ್ಯ ಸಹೋದರರು (ಹಾರ್ದಿಕ್, ಕೃನಾಲ್)ರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ.
ಇದೇ ವೇಳೆ ಡೆಲ್ಲಿ ಡೇರ್'ಡೆವಿಲ್ಸ್ ರಿಶಬ್ ಪಂತ್, ಶ್ರೇಯಸ್ ಅಯ್ಯರ್'ರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಯಾವ ಆಟಗಾರರನ್ನು ಉಳಿಸಿಕೊಳ್ಳಲಿದ್ದೇವೆ ಎಂಬ ಪಟ್ಟಿಯನ್ನು ಸಲ್ಲಿಸಲು ತಂಡಗಳಿಗೆ ಜ.4 ಗಡುವಾಗಿದೆ. ಕೃನಾಲ್ ಇನ್ನೂ ಭಾರತ ಪರ ಆಡದಿರುವ ಕಾರಣ, ಅವರನ್ನು ಕೇವಲ ₹3 ಕೋಟಿಗೆ ಉಳಿಸಿಕೊಳ್ಳಬಹುದಾಗಿದೆ. ಇನ್ನು ಪೊಲ್ಲಾರ್ಡ್ ಹಾಗೂ ಬುಮ್ರಾ ಅವರನ್ನು ‘ರೈಟ್ ಟು ಮ್ಯಾಚ್’ ಬಳಸಿ ಖರೀದಿಸಲು ಮುಂಬೈ ತೀರ್ಮಾನಿಸಿದೆ ಎನ್ನಲಾಗಿದೆ.
ಇನ್ನು ಸಿಎಸ್'ಕೆ ಧೋನಿ ಹಾಗೂ ಸುರೇಶ್ ರೈನಾ ಅವರನ್ನು ಉಳಿಸಿಕೊಳ್ಳುವ ಇರಾದೆಯಲ್ಲಿದ್ದರೆ, ಹೈದರಾಬಾದ್ ಡೇವಿಡ್ ವಾರ್ನರ್ ಹಾಗೂ ಯುವ ಪ್ರತಿಭೆ ದೀಪಕ್ ಹೂಡಾ ಅವರ ಮೇಲೆ ಕಣ್ಣಿಟ್ಟಿದೆ ಎನ್ನಲಾಗಿದೆ. ಐಪಿಎಲ್ ಹರಾಜು ಪ್ರಕ್ರಿಯೆಯು ಬೆಂಗಳೂರಿನಲ್ಲಿ ಜನವರಿ 27&28ರಂದು ನಡೆಯಲಿದೆ
