ಆಡಿದ 10 ಪಂದ್ಯಗಳಿಂದ 16 ಅಂಕ ಕಲೆಹಾಕಿದ ಮುಂಬೈ ಪ್ಲೇ ಆಫ್ ಸುತ್ತಿಗೆ ಪ್ರವೇಶ ಖಚಿತಪಡಿಸಿಕೊಂಡರೆ, ಆಡಿದ 11 ಪಂದ್ಯಗಳಲ್ಲಿ 8ನೇ ಸೋಲು ದಾಖಲಿಸಿದ ಆರ್‌ಸಿಬಿ, ಪ್ಲೇ ಆ್ ಸುತ್ತಿನಿಂದ ಬಹುತೇಕ ಹೊರಬಿದ್ದಂತಾಗಿದೆ.ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್‌ಗಳಿಸಿತ್ತು. ಈ ಸುಲಭದ ಗುರಿ ಬೆನ್ನಟ್ಟಿದ ಮುಂಬೈ ಇನ್ನೂ ಒಂದು ಎಸೆತ ಇರುವಂತೆಯೇ ಕೇವಲ 5 ವಿಕೆಟ್ ನಷ್ಟಕ್ಕೆ 163 ರನ್‌ಗಳಿಸುವ ಮೂಲಕ ಜಯ ಸಾಧಿಸಿತು.

ಮುಂಬೈ(ಮೇ.01): ನಾಯಕ ರೋಹಿತ್ ಶರ್ಮಾ (56 ರನ್) ಅವರ ಅಮೋಘ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ, ಸೋಮವಾರ ಇಲ್ಲಿ ನಡೆದ ಐಪಿಎಲ್ ಟಿ20 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು.

ಆಡಿದ 10 ಪಂದ್ಯಗಳಿಂದ 16 ಅಂಕ ಕಲೆಹಾಕಿದ ಮುಂಬೈ ಪ್ಲೇ ಆಫ್ ಸುತ್ತಿಗೆ ಪ್ರವೇಶ ಖಚಿತಪಡಿಸಿಕೊಂಡರೆ, ಆಡಿದ 11 ಪಂದ್ಯಗಳಲ್ಲಿ 8ನೇ ಸೋಲು ದಾಖಲಿಸಿದ ಆರ್‌ಸಿಬಿ, ಪ್ಲೇ ಆ್ ಸುತ್ತಿನಿಂದ ಬಹುತೇಕ ಹೊರಬಿದ್ದಂತಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್‌ಗಳಿಸಿತ್ತು. ಈ ಸುಲಭದ ಗುರಿ ಬೆನ್ನಟ್ಟಿದ ಮುಂಬೈ ಇನ್ನೂ ಒಂದು ಎಸೆತ ಇರುವಂತೆಯೇ ಕೇವಲ 5 ವಿಕೆಟ್ ನಷ್ಟಕ್ಕೆ 163 ರನ್‌ಗಳಿಸುವ ಮೂಲಕ ಜಯ ಸಾಧಿಸಿತು.

ಆರಂಭಿಕಆಘಾತ

ಮುಂಬೈ ತಂಡ ಪಾರ್ಥಿವ್ ಪಟೇಲ್ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡಿತು. ಆದರೆ ನಂತರ ಬಂದ ಜೋಸ್ ಬಟ್ಲರ್ (21 ಎಸೆತಗಳಲ್ಲಿ 33) ಮತ್ತು ನಿತೀಶ್ ರಾಣಾ (28 ಎಸೆತಗಳಲ್ಲಿ 27 ರನ್) 61 ರನ್ ಜೊತೆಯಾಟದ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಬಳಿಕ ಕ್ರೀಸ್‌ಗೆ ಬಂದ ನಾಯಕ ರೋಹಿತ್ ಶರ್ಮಾ, ಪೊಲ್ಲಾರ್ಡ್ ಜೊತೆಗೂಡಿ ಆರಂಭದಿಂದಲೇ ಹೊಡೆಬಡೆಯ ಆಟದ ಮೂಲಕ ಯಾವುದೇ ಹಂತದಲ್ಲೂ ತಂಡ ಒತ್ತಡಕ್ಕೆ ಸಿಗದಂತೆ ನೋಡಿಕೊಂಡರು.

ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. ಹೀಗಾಗಿ 180ರ ಆಸುಪಾಸು ತಲುಪಬಹುದಾಗಿದ್ದ ಸ್ಕೋರ್ 162ಕ್ಕೆ ಸೀಮಿತಗೊಂಡಿತು. ಆರ್‌ಸಿಬಿ ಪರ ಎಬಿಡಿ ವಿಲಿಯರ್ಸ್‌ 43, ಪವನ್ ನೇಗಿ 35, ಕೇದಾರ್ ಜಾಧವ್ 28, ಕೊಹ್ಲಿ 20 ರನ್ ಹೊಡೆದು ಗಮನ ಸೆಳೆದರು.

ಸ್ಕೋರ್

ಆರ್'ಸಿಬಿ: 162/08(20/20)

ಮುಂಬೈ ಇಂಡಿಯನ್ಸ್: 165/5(19.5/20)

ಪಂದ್ಯಶ್ರೇಷ್ಠ: ರೋಹಿತ್ ಶರ್ಮಾ