ಕೋಲ್ಕತಾ ಹಾಗೂ ಪುಣೆ ಸಮಾನ ಅಂಕ ಹೊಂದಿದ್ದರೂ, ಕೋಲ್ಕತಾ ರನ್‌'ರೇಟ್‌ ಉತ್ತಮವಾಗಿದೆ. ಹಾಗಾಗಿ, ಕೋಲ್ಕತಾದ ಪ್ಲೇ-ಆಫ್‌ ಸ್ಥಾನ ಈಗಾಗಲೇ ಭದ್ರವಾಗಿದೆ.

ಬೆಂಗಳೂರು(ಮೇ.14): ಶನಿವಾರದ ಪಂದ್ಯ ಗೆಲ್ಲುವುದರೊಂದಿಗೆ ಮುಂಬೈ ತನ್ನ 14 ಪಂದ್ಯಗಳಿಂದ 20 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿತು. ಇಷ್ಟೇ ಪಂದ್ಯಗಳಿಂದ 17 ಅಂಕ ಗಳಿಸಿರುವ ಹಾಲಿ ಚಾಂಪಿಯನ್‌ ಹೈದ್ರಾಬಾದ್‌ ಕೂಡ ಈಗಾಗಲೇ ಪ್ಲೇ-ಆಫ್‌ ಸ್ಥಾನ ಭದ್ರ​ಪಡಿಸಿಕೊಂಡಿದೆ.

ಆದರೆ ಕೋಲ್ಕತಾ 14 ಪಂದ್ಯಗಳಿಂದ 16 ಅಂಕ, ಪುಣೆ 13 ಪಂದ್ಯಗಳಿಂದ 16 ಅಂಕ ಹಾಗೂ ಪಂಜಾಬ್‌ 13 ಪಂದ್ಯಗಳಿಂದ 14 ಅಂಕ ಗಳಿಸಿ ನಂತರದ ಸ್ಥಾನಗಳಲ್ಲಿವೆ. ಕೋಲ್ಕತಾ ಹಾಗೂ ಪುಣೆ ಸಮಾನ ಅಂಕ ಹೊಂದಿದ್ದರೂ, ಕೋಲ್ಕತಾ ರನ್‌'ರೇಟ್‌ ಉತ್ತಮವಾಗಿದೆ. ಹಾಗಾಗಿ, ಕೋಲ್ಕತಾದ ಪ್ಲೇ-ಆಫ್‌ ಸ್ಥಾನ ಈಗಾಗಲೇ ಭದ್ರವಾಗಿದೆ. ಅದರೆ ಪುಣೆ ಹಾಗೂ ಪಂಜಾಬ್ ತಂಡಗಳ ಸ್ಥಾನಗಳು ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಇಂದು ಪುಣೆ ಹಾಗೂ ಪಂಜಾಬ್‌ ತಮ್ಮ ಕಡೆಯ ಲೀಗ್‌ ಪಂದ್ಯ ಆಡಲಿವೆ. ಪುಣೆ ಗೆದ್ದರೆ 18 ಅಂಕಗಳೊಂದಿಗೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿ ಪ್ಲೇ-ಆಫ್‌'ಗೇರಲಿದೆ. ಪಂಜಾಬ್‌ ಗೆದ್ದರೆ ಕೋಲ್ಕತಾ ಹಾಗೂ ಪುಣೆಯಷ್ಟೇ ಅಂಕ ಗಳಿಸಲಿದೆ. ಅಂತಹ ಸಂದರ್ಭದಲ್ಲಿ ರನ್‌'ರೇಟ್‌ ಕಳಪೆ ಆಗಿರುವುದರಿಂದ ಪುಣೆ ಹೊರಬೀಳಲಿದ್ದು, ಪಂಜಾಬ್‌ 4ನೇ ಸ್ಥಾನಿಯಾಗಿ ಪ್ಲೇ-ಆಫ್‌'ಗೇರಲಿದೆ.

ಒಂದು ವೇಳೆ, ಮಳೆ ಬಂದು ಪಂದ್ಯ ರದ್ದಾದರೆ ಪುಣೆ 17 ಅಂಕ ಗಳಿಸಿ ಪ್ಲೇ-ಆಫ್‌ಗೇರಲಿದ್ದರೆ, ಪಂಜಾಬ್‌ 15 ಅಂಕ ಗಳಿಸಿ ಹೊರಬೀಳಲಿದೆ.