ಪೊಲೆಂಡ್(ಜು.08): ಕುಂಟೋ ಅಥ್ಲೆಟಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ. 200 ಮೀಟರ್ ಓಟದಲ್ಲಿ ಕೇರಳದ ಮೊಹಮ್ಮದ್ ಅನಾಸ್ ಚಿನ್ನದ ಪದಕ ಗೆದ್ದಿದ್ದಾರೆ. ಅನಾಸ್ 21.18 ಸೆಕೆಂಡ್‌ಗಳಲ್ಲಿ ಗುರಿ ತಲುಪೋ ಮೂಲಕ ಚಿನ್ನದ ಪದಕ ಗೆದಿದ್ದಾರೆ.  ಇನ್ನು ಮತ್ತೊರ್ವ ಕೇರಳದ  ಓಟಗಾರ ನೊಹ ನಿರ್ಮಲ್ 21.66 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. 

ಇದನ್ನೂ ಓದಿ: ವಿಂಬಲ್ಡನ್ 2019: ಪ್ರಿ ಕ್ವಾರ್ಟರ್ ಗೆ ಫೆಡರರ್

400ಮೀಟರ್ ಹರ್ಡಲ್ಸ್ ವಿಭಾಗದಲ್ಲಿ ಕೇರಳದ ಎಂಪಿ ಜಬೀರ್ ಚಿನ್ನ ಗೆದ್ದಿದ್ದಾರೆ. ಜಬೀರ್ 50.21 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದಾರೆ. ಇನ್ನು ಜಿತಿನ್ ಪೌಲ್ 52.26 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದಿದ್ದಾರೆ. ಮಹಿಳಾ ರಿಲೆಯಲ್ಲಿ ಭಾರತ ಉತ್ತಮ ನಿರ್ವಹಣೆ ತೋರಿದೆ.