ವಿದಾಯದ ಬಳಿಕ ಧೋನಿ ಬಿಜೆಪಿಗೆ; ತಲ್ಲಣ ಸೃಷ್ಟಿಸಿದೆ ಕೇಂದ್ರ ಮಾಜಿ ಸಚಿವನ ಹೇಳಿಕೆ!

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂದು ಬಿಜೆಪಿ ಮುಖಂಡನ ಹೇಳಿಕೆ ಇದೀಗ ಕ್ರಿಕೆಟ್ ಮಾತ್ರವಲ್ಲ, ರಾಜಕೀಯದಲ್ಲೂ ತಲ್ಲಣ ಸೃಷ್ಟಿಸಿದೆ. 

MS Dhoni will join bjp after requirement says BJP leader Sanjay Paswan

ಮುಂಬೈ(ಜು.13): ವಿಶ್ವಕಪ್ ಟೂರ್ನಿಯಿಂದ ಟೀಂ ಇಂಡಿಯಾ ಹೊರಬಿದ್ದ ಬೆನ್ನಲ್ಲೇ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ವಿದಾಯ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಕುರಿತು ಧೋನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ವಿದಾಯ ಸದ್ಯಕ್ಕಿದೆಯೋ ಗೊತ್ತಿಲ್ಲ, ವಿದಾಯ ಹೇಳಿದ ಬಳಿಕ ಧೋನಿ ಬಿಜೆಪಿ ಸೇರಲಿದ್ದಾರೆ ಅನ್ನೋ ಮಾತು ಕ್ರಿಕೆಟ್ ಮಾತ್ರವಲ್ಲ ರಾಜಕೀಯದಲ್ಲೂ ತಲ್ಲಣ ಸೃಷ್ಟಿಸಿದೆ.

ಇದನ್ನೂ ಓದಿ: ಗಾಯದಲ್ಲೇ ಸೆಮಿಫೈನಲ್ ಆಡಿದ್ದ ಧೋನಿ; ಕಣ್ಣೀರಿಟ್ಟ ಫ್ಯಾನ್ಸ್!

ಎಂ.ಎಸ್.ಧೋನಿ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ, ಬಿಜೆಪಿ ಮುಖಂಡ ಸಂಜಯ್ ಪಾಸ್ವಾನ್ ಹೇಳಿದ್ದಾರೆ. ಈ ಕುರಿತು ಸುದೀರ್ಘ ಚರ್ಚೆಗಳಾಗಿವೆ. ವಿದಾಯದ ಬಳಿಕ ಧೋನಿ ಜೊತೆ ಮಾತುಕತೆ ನಡೆಸಿ ಪಕ್ಷಕ್ಕೆ ಸ್ವಾಗತಿಸಲಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ವಿಂಡೀಸ್‌ ಪ್ರವಾಸಕ್ಕೆ ಧೋನಿಗಿಲ್ಲ ಸ್ಥಾನ?

ಜಾರ್ಖಂಡ್ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ದೂರ ದೃಷ್ಟಿಯಿದೆ ಧೋನಿಗಿದೆ. ಹೀಗಾಗಿ ಧೋನಿಗೆ ಜಾರ್ಖಂಡ್ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ  ಇದೆ. ದೆಹಲಿ ಕ್ರಿಕೆಟಿಗ ಗೌತಮ್ ಗಂಭೀರ್ ರೀತಿಯಲ್ಲೇ ಧೋನಿ ಕೂಡ ವಿದಾಯದ ಬಳಿಕ ಬಿಜೆಪಿ ಸೇರಲಿದ್ದಾರೆ ಎಂದು ಪಾಸ್ವಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios