ಐಪಿಎಲ್: ಚೆನ್ನೈ ಸೂಪರ್’ಕಿಂಗ್ಸ್’ಗೆ ಸಾಟಿಯಾಗದ ಡೆಲ್ಲಿ

MS Dhoni Watson Star As Chennai Edge Delhi
Highlights

ಈ ಗೆಲುವಿನೊಂದಿಗೆ ಚೆನ್ನೈ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದರೆ, ಡೆಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿಯಿತು. ಅಲ್ಲದೇ ಪ್ಲೇ ಆಫ್ ಪ್ರವೇಶಿಸುವ ಡೆಲ್ಲಿ ಕನಸು ಬಹುತೇಕ ಭಗ್ನವಾದಂತಾಗಿದೆ.

ಪುಣೆ[ಏ.30]: ರಿಶಭ್ ಪಂತ್[79] ವಿಜಯ್ ಶಂಕರ್[54*] ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ ಚೆನ್ನೈ ಸೂಪರ್’ಕಿಂಗ್ಸ್ ಪಡೆಯ ಸಂಘಟಿತ ಬೌಲಿಂಗ್ ನೆರವಿನಿಂದ 13 ರನ್’ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಚೆನ್ನೈ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದರೆ, ಡೆಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿಯಿತು. ಅಲ್ಲದೇ ಪ್ಲೇ ಆಫ್ ಪ್ರವೇಶಿಸುವ ಡೆಲ್ಲಿ ಕನಸು ಬಹುತೇಕ ಭಗ್ನವಾದಂತಾಗಿದೆ.
ಸಿಎಸ್’ಕೆ ನೀಡಿದ್ದ 212 ರನ್’ಗಳ ಬೃಹತ್ ಗುರಿ ಬೆನ್ನತ್ತಿದ ಡೆಲ್ಲಿ ಆರಂಭದಲ್ಲೇ ಮುಗ್ಗರಿಸಿತು. ಪೃಥ್ವಿ ಶಾ[9], ಕಾಲಿನ್ ಮನ್ರೋ[26] ವಿಕೆಟ್ ಕಳೆದುಕೊಂಡಿತು. ಕಳೆದ ಪಂದ್ಯದ ಹೀರೋ ಶ್ರೇಯಸ್ ಅಯ್ಯರ್ ಕೂಡಾ[13] ಬೇಗನೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಮ್ಯಾಕ್ಸ್’ವೆಲ್ ಆಟ ಕೇವಲ 6 ರನ್’ಗಳಿಗೆ ಸೀಮಿತವಾಯಿತು. 9 ಓವರ್ ಮುಕ್ತಾಯದ ವೇಳೆಗೆ ಡೆಲ್ಲಿ 4 ವಿಕೆಟ್ ಕಳೆದುಕೊಂಡು 74 ರನ್ ಬಾರಿಸಿತ್ತು.
ಮಿಂಚಿದ ಪಂತ್-ವಿಜಯ್: ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿಗೆ ಪಂತ್ ಹಾಗೂ ವಿಜಯ್ ಶಂಕರ್ ಆಸರೆಯಾದರು. 5ನೇ ವಿಕೆಟ್’ಗೆ 88ರನ್ ಬಾರಿಸಿದ ಈ ಜೋಡಿ ಡೆಲ್ಲಿ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಎನ್ಜಿಡಿ ಯಶಸ್ವಿಯಾದರು. ಪಂತ್ 45 ಎಸೆತಗಳಲ್ಲಿ 79 ರನ್ ಸಿಡಿಸಿದರೆ, ವಿಜಯ್ ಶಂಕರ್ ಕೇವಲ 31 ಎಸೆತಗಳಲ್ಲಿ 54 ರನ್ ಚಚ್ಚಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಫಲವಾಗಲಿಲ್ಲ.
ಇದಕ್ಕೂ ಮೊದಲು ಸಿಎಸ್’ಕೆ ವಾಟ್ಸನ್[78] ಹಾಗೂ ಧೋನಿ[51] ಭರ್ಜರಿ ಬ್ಯಾಟಿಂಗ್ ನೆರವಿನಿಂದ 211 ರನ್ ಕಲೆಹಾಕಿತ್ತು.
ಸಂಕ್ಷಿಪ್ತ ಸ್ಕೋರ್:
ಸಿಎಸ್’ಕೆ: 211/4
ವಾಟ್ಸನ್:78
ಡಿಡಿ: 198/5
ರಿಶಭ್ ಪಂತ್: 79

loader