ಎಮ್ ಎಸ್ ಧೋನಿ-ವಿರಾಟ್ ಕೊಹ್ಲಿಯ ಹೊಸ ಹೆಸರೇನು?

First Published 24, Jun 2018, 2:13 PM IST
MS Dhoni, Virat Kohli Now Have New Names
Highlights

ಟೀಂ ಇಂಡಿಯಾ ಕ್ರಿಕೆಟಿಗರನ್ನ ತಂಡದ ಸಹ ಆಟಗಾರರು ಬೇರೆ ಬೇರೆ ಹೆಸರುಗಳಿಂದೆ ಕರೆಯುತ್ತಾರೆ. ನಾಯಕ ವಿರಾಟ್ ಕೊಹ್ಲಿ ಚೀಕು ಅಂತಾನೆ ಜನಪ್ರೀಯರಾಗಿದ್ದರೆ, ಎಮ್ ಎಸ್ ಧೋನಿಯನ್ನ ಎಲ್ಲರು ಮಾಹಿ ಭಾಯಿ ಎಂದೇ ಕರೆಯುತ್ತಾರೆ. ಇದೀಗ ಕೊಹ್ಲಿ ಹಾಗೂ ಧೋನಿಗೆ ಹೊಸ ಹೆಸರು ಇಡಲಾಗಿದೆ. ಆ ಹೆಸರೇನು? ಇಲ್ಲಿದೆ.

ಲಂಡನ್(ಜೂ.24): ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಎಮ್ ಎಸ್ ಧೋನಿಗೆ ಹೊಸ ಹೆಸರು ಇಡಲಾಗಿದೆ. ತಂಡದ ಸಹ ಆಟಗಾರ ಶಿಖರ್ ಧವನ್ ಧೋನಿ ಹಾಗೂ ಕೊಹ್ಲಿಗೆ ಹೊಸ ಹೆಸರಿಟ್ಟಿದ್ದಾರೆ.

ಎಮ್ ಎಸ್ ಧೋನಿಗೆ ರಾಮ ಎಂದು ಹೆಸರಿಟ್ಟಿರುವ ಧವನ್, ಕೊಹ್ಲಿಗೆ ಲಕ್ಷಣ ಎಂದು ನಾಮಕರಣ ಮಾಡಿದ್ದಾರೆ. ಇಷ್ಟೇ ಅಲ್ಲ, ಧವನ್ ಹಾಡು ಹೇಳೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

 

 

ಧೋನಿ ಹಾಗೂ ಕೊಹ್ಲಿ ನನ್ನ ಎರಡು ರತ್ನಗಳು ಎಂದು ಹೇಳಿರುವ ಧವನ್, ಹಾಡಿನ ಮೂಲಕ ವಿವರಿಸಿದ್ದಾರೆ. ಟೀಮ್ಇಂಡಿಯಾ ಇದೀಗ ಐರ್ಲೆಂಡ್ ಹಾಗೂ ಇಂಗ್ಲೆಂಡ್  ಪ್ರವಾಸಕ್ಕಾಗಿ ಇಂಗ್ಲೆಂಡ್‌ಗೆ ತೆರಳಿರುವ ಭಾರತೀಯ ಕ್ರಿಕೆಟಿಗರು ಸಿಕ್ಕ ಸಮಯದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. 

ಭಾರತ ಜೂನ್ 27, 29 ರಂದು ಐರ್ಲೆಂಡ್ ವಿರುದ್ಧ 2 ಟಿ-ಟ್ವೆಂಟಿ ಪಂದ್ಯ ಆಡಲಿದೆ. ಇನ್ನು ಜುಲೈ 3 ರಿಂದ ಇಂಗ್ಲೆಂಡ್ ವಿರುದ್ಧ 3 ಟಿ-ಟ್ವೆಂಟಿ, 3 ಏಕದಿನ ಹಾಗೂ 5  ಟೆಸ್ಟ್ ಪಂದ್ಯ ಆಡಲಿದೆ.

loader