ಶಿಷ್ಟಾಚಾರದ ಪ್ರಕಾರ, ದೀರ್ಘಕಾಲದ ವಿಶ್ರಾಂತಿಗೊಳಗಾಗುವ ಕ್ರಿಕೆಟಿಗರು, ಯಾವುದೇ ಸರಣಿಯಲ್ಲಿ ಆಡುವ ಮುನ್ನ ಪ್ರಥಮ ದರ್ಜೆಯಲ್ಲಿ ಒಂದು ಪಂದ್ಯವನ್ನಾದರೂ ಆಡಬೇಕಿದೆ.

ಮುಂಬೈ(ಡಿ.05): ಸುಮಾರು ಎರಡೂವರೆ ತಿಂಗಳುಗಳ ವಿಶ್ರಾಂತಿಯ ನಂತರ ಟೀಂ ಇಂಡಿಯಾ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಜ. 15ರಂದು ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಹಿಂದೆ, ಅ. 29ರಂದು ವಿಶಾಖಪಟ್ಟಣಂನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಮಾಹಿ ಆಡಿದ್ದರು. ಇದೀಗ, ಯಾವುದೇ ಅಭ್ಯಾಸ ಪಂದ್ಯದಲ್ಲಿ ಆಡದೇ ನೇರವಾಗಿ ಏಕದಿನ ಸರಣಿಯಲ್ಲಿ ಅವರು ಕಾಲಿಡುತ್ತಿದ್ದಾರೆಂದು ಕೆಲವು ಮಾಧ್ಯಮಗಳು ಹೇಳಿವೆ.

ಶಿಷ್ಟಾಚಾರದ ಪ್ರಕಾರ, ದೀರ್ಘಕಾಲದ ವಿಶ್ರಾಂತಿಗೊಳಗಾಗುವ ಕ್ರಿಕೆಟಿಗರು, ಯಾವುದೇ ಸರಣಿಯಲ್ಲಿ ಆಡುವ ಮುನ್ನ ಪ್ರಥಮ ದರ್ಜೆಯಲ್ಲಿ ಒಂದು ಪಂದ್ಯವನ್ನಾದರೂ ಆಡಬೇಕಿದೆ.