ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಎಂ ಎಸ್ ಧೋನಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಕಾರ್ಡಿಫ್ ಪಂದ್ಯದಲ್ಲಿ ಧೋನಿ ಕಣಕ್ಕಿಳಿದರೆ ದಾಖಲೆ ನಿರ್ಮಾಣವಾಗಲಿದೆ. ಅಷ್ಟಕ್ಕು ಧೋನಿ ನಿರ್ಮಿಸಲಿರುವ ದಾಖಲೆ ಯಾವುದು? ಇಲ್ಲಿದೆ ವಿ

ಕಾರ್ಡಿಫ್(ಜು.05): ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ವಿನೂತನ ದಾಖಲೆ ನಿರ್ಮಿಸಲಿದ್ದಾರೆ. ಕಾರ್ಡಿಫ್‌ ಪಂದ್ಯದಲ್ಲಿ ಕಣಕ್ಕಿಳಿದರೆ ಧೋನಿ 500ನೇ ಅಂತಾರಾಷ್ಟ್ರೀ ಪಂದ್ಯ ಆಡಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

90 ಟೆಸ್ಟ್, 318 ಏಕದಿನ ಹಾಗೂ 90 ಟಿ20 ಪಂದ್ಯ ಆಡಿರುವ ಎಂ ಎಸ್ ಧೋನಿ ಓಟ್ಟು 499 ಪಂದ್ಯ ಆಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯ ಧೋನಿ ಪಾಲಿಗೆ 500ನೇ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ.

ಎಂ ಎಸ್ ಧೋನಿ ಈ ಸಾಧನೆ ಮಾಡಿದರೆ, ಭಾರತದ 3ನೇ ಕ್ರಿಕೆಟಿಗ ಅನ್ನೋ ದಾಖಲೆ ಬರೆಯಲಿದ್ದಾರೆ. ಧೋನಿಗೂ ಮೊದಲು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದಾರೆ.