ಬುಮ್ರಾಗೆ ಕಾರಿನ ಕೀ ಸಿಗುತ್ತಿದ್ದಂತೆ ಎಂ.ಎಸ್.ಧೋನಿ, ಸಹ ಆಟಗಾರರನ್ನೆಲ್ಲಾ ಕೂರಿಸಿಕೊಂಡು ಮೈದಾನದ ಸುತ್ತ ಕಾರ್‌'ನಲ್ಲಿ ಸುತ್ತಾಡಿದರು.
ಕೊಲಂಬೊ(ಸೆ.04): ಮಹೇಂದ್ರ ಸಿಂಗ್ ಧೋನಿ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಯಾರಿಗೆ ಬೈಕ್ ಬಹುಮಾನವಾಗಿ ಸಿಕ್ಕರು ಅವರನ್ನು ಕೂರಿಸಿಕೊಂಡು ಮೈದಾನದಲ್ಲೇ ಜಾಲಿ ರೈಡ್ ಹೋಗಿದ್ದನ್ನು ನೋಡಿದ್ದು ಈಗ ಇತಿಹಾಸ. ಆದರೆ ಈಗ ಹೊಸ ವಿಷ್ಯಾ ಏನಪ್ಪ ಅಂದ್ರೆ ಜಸ್'ಪ್ರೀತ್ ಬುಮ್ರಾ ಲಂಕಾ ವಿರುದ್ಧ ಭರ್ಜರಿ ಪ್ರದರ್ಶನ ತೋರಿ 15 ವಿಕೆಟ್ ಕಬಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ಕಾರನ್ನು ಗೆದ್ದುಕೊಂಡಿದ್ದರು. ಬುಮ್ರಾಗೆ ಕಾರಿನ ಕೀ ಸಿಗುತ್ತಿದ್ದಂತೆ ಎಂ.ಎಸ್.ಧೋನಿ, ಸಹ ಆಟಗಾರರನ್ನೆಲ್ಲಾ ಕೂರಿಸಿಕೊಂಡು ಮೈದಾನದ ಸುತ್ತ ಕಾರ್'ನಲ್ಲಿ ಸುತ್ತಾಡಿದರು.

ದುಬಾರಿ ಕಾರು, ಬೈಕ್'ಗಳನ್ನು ಹೊಂದಿರುವ ಧೋನಿ ಸಣ್ಣ ಕಾರ್'ನಲ್ಲಿ ಸುತ್ತಾಡಿದ್ದು ಎಲ್ಲರ ಗಮನ ಸೆಳೆಯಿತು.
ಆ ವೀಡಿಯೋ ಹಾಗೂ ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ.
