ಟೀಂ ಇಂಡಿಯಾದ ಕೆಲವು ಆಟಗಾರರು ರಿಲ್ಯಾಕ್ಸ್ ಮಾಡಲು ಆರಿಸಿಕೊಂಡಿದ್ದು ಚೆನ್ನೈ ಇಂಟರ್'ನ್ಯಾಶನಲ್ ಏರ್'ಪೋರ್ಟ್..!

ಚೆನ್ನೈ(ಸೆ.18): ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯವನ್ನು ಗೆದ್ದ ವಿರಾಟ್ ಕೊಹ್ಲಿ ಫುಲ್ ರಿಲ್ಯಾಕ್ಸ್ ಮೂಡಿಗೆ ಜಾರಿದಂತೆ ಕಂಡುಬರುತ್ತಿದೆ.

ಅರೇ ಅದರಲ್ಲೇನು ವಿಶೇಷ ಅಂತಿರಾ..? ಅವರು ರಿಲ್ಯಾಕ್ಸ್ ಮಾಡಿದ್ದು ಮನೆಯಲ್ಲೋ ಇಲ್ಲಾ ಹೋಟೆಲ್'ನಲ್ಲೋ ಆಗಿದ್ದರೆ ಇಷ್ಟೊಂದು ಸುದ್ದಿಯಾಗುತ್ತಿರಲಿಲ್ಲ. ಬದಲಾಗಿ ಟೀಂ ಇಂಡಿಯಾದ ಕೆಲವು ಆಟಗಾರರು ರಿಲ್ಯಾಕ್ಸ್ ಮಾಡಲು ಆರಿಸಿಕೊಂಡಿದ್ದು ಚೆನ್ನೈ ಇಂಟರ್'ನ್ಯಾಶನಲ್ ಏರ್'ಪೋರ್ಟ್..!

ಅದರಲ್ಲೂ ಕ್ರೀಡಾ ಕ್ಷೇತ್ರದಲ್ಲಿ ಅತಿಹೆಚ್ಚು ಸಂಪಾದನೆ ಮಾಡುವ ಮಾಜಿ ನಾಯಕ ಎಂ.ಎಸ್. ಧೋನಿ ಸೇರಿದಂತೆ ನಾಯಕ ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಮುಂತಾದ ಟೀಂ ಇಂಡಿಯಾ ಕ್ರಿಕೆಟಿಗರು ಏರ್'ಪೋರ್ಟ್'ನಲ್ಲೇ ರೆಸ್ಟ್ ಮಾಡುತ್ತಿರುವ ಫೋಟೋಗಳೀಗ ವೈರಲ್ ಆಗುತ್ತಿವೆ...

Scroll to load tweet…