ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌'ಗೆ ಇಳಿದಿದ್ದ ಧೋನಿ 1 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 18ರನ್‌'ಗಳಿಸಿದರು.
ನವದೆಹಲಿ(ಮಾ.15): ವಿಶ್ವಕಪ್ ಫೈನಲ್'ನಲ್ಲಿ ಸಿಡಿಸಿದಂತೆ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಜಾರ್ಖಂಡ್ ತಂಡಕ್ಕೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಮೋಘ ಜಯ ತಂದಿತ್ತರು.
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್'ನಲ್ಲಿ ವಿದರ್ಭ ತಂಡದ ವಿರುದ್ಧ ಧೋನಿ ಸಿಡಿಸಿದ ಸಿಕ್ಸರ್'ನಿಂದಾಗಿ ಜಾರ್ಖಂಡ್ ತಂಡ 4.5 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತಲ್ಲದೇ ಸೆಮೀಸ್ ಹಂತಕ್ಕೆ ಲಗ್ಗೆ ಇಟ್ಟಿತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್'ಗೆ ಇಳಿದಿದ್ದ ಧೋನಿ 1 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 18ರನ್'ಗಳಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ತಂಡ ನಿಗದಿತ ಓವರ್ಗಳಲ್ಲಿ 9 ವಿಕೆಟ್'ಗೆ 159ರನ್'ಗಳ ಸಾಧಾರಣ ಮೊತ್ತ ಗಳಿಸಿತು. ರವಿ ಜಂಗಿದ್ 62 ಮತ್ತು ಗಣೇಶ್ ಸತೀಶ್ 35 ರನ್'ಗಳಿಸಿ ತಂಡವನ್ನು 100ರ ಗಡಿ ದಾಟಿಸಿದರು.
ನಂತರ ಬ್ಯಾಟಿಂಗ್ ಮಾಡಿದ ಜಾರ್ಖಂಡ್ 45.1 ಓವರ್'ಗಳಲ್ಲಿ 4 ವಿಕೆಟ್'ಗೆ 165ರನ್'ಗಳಿಗೆ ಜಯ ಸಾಧಿಸಿತು. ಜಾರ್ಖಂಡ್ ಪರ ಇಶಾನ್ ಕಿಶನ್ 35, ಪ್ರತ್ಯುಶ್ ಸಿಂಗ್ 33, ಇಶಾಂಕ್ ಜಗ್ಗಿ ಅಜೇಯ 41ರನ್'ಗಳಿಸಿ ತಂಡದ ಜಯದಲ್ಲಿ ಮಹತ್ವದ ಪಾತ್ರವಹಿಸಿದರು.
ಸಂಕ್ಷಿಪ್ತ ಸ್ಕೋರ್
ವಿದರ್ಭ: 50 ಓವರ್'ಗಳಲ್ಲಿ 9 ವಿಕೆಟ್ಗೆ 159
(ರವಿ ಜಂಗಿದ್ 62, ಗಣೇಶ್ ಸತೀಶ್ 35, ಮೊನು 27ಕ್ಕೆ 2)
ಜಾರ್ಖಂಡ್: 45.1 ಓವರ್'ಗಳಲ್ಲಿ 4 ವಿಕೆಟ್ಗೆ 165
(ಇಶಾಂಕ್ ಅಜೇಯ 41, ಇಶಾನ್ 35, ರವಿಕುಮಾರ್ 25ಕ್ಕೆ 2)
ಫಲಿತಾಂಶ: ಜಾರ್ಖಂಡ್ಗೆ 6 ವಿಕೆಟ್ಗಳ ಜಯ
