ಶರ್ಮಾ ಬಿಚ್ಚಿಟ್ಟ ಸತ್ಯ
ನವದೆಹಲಿ(ಸೆ.25): ಭಾರತ 2007ರ ಐಸಿಸಿ ಟಿ20 ವಿಶ್ವಕಪ್ ಗೆದ್ದು ಭಾನುವಾರಕ್ಕೆ ಸರಿಯಾಗಿ 10 ವರ್ಷ. ಈ ವೇಳೆ ಪಾಕಿಸ್ತಾನ ವಿರುದ್ಧ ಫೈನಲ್ ಪಂದ್ಯದಲ್ಲಿ ಕೊನೆ ಓವರ್ ಬೌಲ್ ಮಾಡಿ ಗೆಲುವು ತಂದುಕೊಟ್ಟಿದ್ದ ಜೋಗಿಂದರ್ ಶರ್ಮಾ, ಧೋನಿ ತಮಗೆ ಸ್ಫೂರ್ತಿ ತುಂಬಿದ್ದು ಹೇಗೆ ಎನ್ನುವುದನ್ನು ಬಹಿರಂಗಗೊಳಿಸಿದ್ದಾರೆ. ಧೋನಿ ವಿರುದ್ಧ ನಾನು ಕೆಲ ದೇಸಿ ಪಂದ್ಯಗಳಲ್ಲಿ ಆಡಿದ್ದೆ. ಆ ಪಂದ್ಯಗಳಲ್ಲಿ ಕೊನೆ ಓವರ್ ಬೌಲ್ ಮಾಡಿದ್ದನ್ನು ಅವರು ನೋಡಿದ್ದರು. ಹೀಗಾಗಿ ನನ್ನನ್ನು ಆಯ್ಕೆ ಮಾಡಿದರು.
ಓವರ್‌ನ 2ನೇ ಎಸೆತದಲ್ಲಿ ಮಿಸ್ಬಾ ಉಲ್ ಹಕ್ ಸಿಕ್ಸರ್ ಸಿಡಿಸಿದ ಬಳಿಕ, ಧೋನಿ ನನ್ನ ಬಳಿ ಬಂದು ಯೋಚಿಸಬೇಡ. ನಿನಗೆ ಹೇಗೆ ಅನಿಸುತ್ತದೆಯೋ ಹಾಗೆ ಬೌಲ್ ಮಾಡು. ಒಂದೊಮ್ಮೆ ಸೋತರೆ ಸಂಪೂರ್ಣ ಹೊಣೆ ನಾನು ಹೊರುತ್ತೇನೆ ಎಂದರು’ ಎಂದು ಜೋಗಿಂದರ್ ಹೇಳಿದ್ದಾರೆ.
