ಸಿಎಸ್ ಕೆ ಗೆಲುವಿನ ಸಿಕ್ರೇಟ್ ಬಿಚ್ಚಿಟ್ಟ ಧೋನಿಪ್ರತೀ ಪಂದ್ಯಕ್ಕೂ ಧೋನಿ ಸೂಪರ್ ಗೇಮ್ ಪ್ಲ್ಯಾನ್ಫಲ ನೀಡಿದ ಬ್ಯಾಟಿಂಗ್ ಆರ್ಡರ್ ಯೋಜನೆಧೋನಿ ಮಿಡಲ್ ಆರ್ಡರ್ ನಲ್ಲೇ ಮುಂದುವರೆದಿದ್ದೇಕೆ?
ನವದೆಹಲಿ(ಜೂ.12): 2008 ರ ಐಪಿಎಲ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆದ್ದಿರುವುದು ಎಲ್ಲರಿಊ ಗೊತ್ತಿರುವ ಸಂಗತಿ. ಆದರೆ ಪ್ರಸಕ್ತ ಐಪಿಎಲ್ ನಲ್ಲಿ ಗೆಲುವಿಗಾಗಿ ಧೊನಿ ಏನೆಲ್ಲಾ ಪ್ಲ್ಯಾನ್ ಮಾಡಿದ್ದರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಇದೀಗ ಖುದ್ದು ಧೊನಿ ತಮ್ಮ ಗೇಮ್ ಪ್ಲ್ಯಾನ್ ನ್ನು ಬಿಚ್ಚಿಟ್ಟಿದ್ದಾರೆ.
ಫೈನಲ್ ಹಂತಕ್ಕೆ ಏರಲು ತಂಡ ಸಾಕಷ್ಟು ಶ್ರಮ ಹಾಕಿದ್ದು, ಪ್ರತೀ ಪಂದ್ಯಕ್ಕೂ ವಿಶಿಷ್ಟ ಯೋಜನೆ ರೂಪಿಸುತ್ತಿದ್ದುದಾಗಿ ಧೋನಿ ಹೇಳಿದ್ದಾರೆ. ಪರಮುಖವಾಗಿ ಬ್ಯಾಟಿಂಗ್ ಆರ್ಡರ್ ನಲ್ಲಿ ಮಾಡಿದ ಹಲವು ಬದಲಾವಣೆಗಳು, ಮತ್ತು ಕೆಲ ಆಟಗಳಲ್ಲಿ ಅದೇ ಸ್ಥಿತ್ಯಂತರವನ್ನು ಕಾಪಾಡಿಕೊಂಡಿದ್ದು, ಪ್ರಶಸ್ತಿ ಮುತ್ತಿಕ್ಕಲು ಸಾಧ್ಯವಾಯಿತು ಎಂದು ಕ್ಯಾಪ್ಟನ್ ಕೂಲ್ ತಿಳಿಸಿದ್ದಾರೆ.
ಇದೇ ವೇಳೆ ತಮ್ಮ ಬ್ಯಾಟಿಂಗ್ ಆರ್ಡರ್ ಕುರಿತು ಮಾತನಡಿದ ಧೋನಿ, ಮಿಡಲ್ ಆರ್ಡರ್ ನಲ್ಲಿ ಆಡುವ ತಮ್ಮ ನಿರ್ಧಾರ ಸರಿಯಾಗಿಯೇ ಇತ್ತು ಎಂದು ಹೇಳಿದ್ದಾರೆ. ಟಾಪ್ ಆರ್ಡರ್ ನಲ್ಲಿ ಇದ್ದ ಶೇನ್ ವಾಟ್ಸನ್, ಅಂಬಟಿ ರಾಯ್ಡು, ಸುರೇಶ್ ರೈನಾ ಸೇರಿದಂತೆ ಪ್ರಮುಖ ಆಟಗಾರರು ಎಲ್ಲ ಆಟಗಳಲ್ಲಿಯೂ ಉತ್ತಮವಾಗಿಯೇ ಇನ್ನಿಂಗ್ಸ್ ಕಟ್ಟುತ್ತಿದ್ದರು. ಅಲ್ಲದೇ ಮಿಡಲ್ ಆರ್ಡರ್ ನಲ್ಲಿ ನಾನು ಮತ್ತು ಡ್ರೇನ್ ಬ್ರಾವೋ ಪಂದ್ಯದ ವೇಗವನ್ನು ಹೆಚ್ವಿಸಲು ಪ್ರಯತ್ನಿಸುತ್ತಿದ್ದೇವು ಎಂದು ಧೋನಿ ತಮ್ಮ ಗೇಮ್ ಪ್ಲ್ಯಾನ್ ಬಿಚ್ಚಿಟ್ಟಿದ್ದಾರೆ.
ಪಂದ್ಯದ ಪ್ರಮುಖ ಘಟ್ಟದಲ್ಲಿ ಒಂದು ವೇಳೆ ತಾವು ಔಟಾದರೂ ಇತರ ಆಟಗಾರರು ಪಂದ್ಯವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ನೆರವಾಗುವಂತೆ ಯೋಜನೆ ರೂಪಿಸಲಾಗುತ್ತಿತ್ತು ಎಂದು ಸಿಎಸ್ ಕೆ ನಾಯಕ ಹೇಳಿದ್ದಾರೆ. ಪ್ರತೀ ಪಂದ್ಯಕ್ಕೂ ಕರಾರುವಕ್ಕಾದ ಯೋಜನೆ ರೂಪಿಸಿದ್ದೇ ಪ್ರಶಸ್ತಿ ಗೆಲುವಿಗೆ ಕಾರಣ ಎಂದು ಧೋನಿ ಹೇಳಿದ್ದಾರೆ.
