ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಧೋನಿ 5 ಪಂದ್ಯಗಳಿಂದ 87ರ ಸ್ಟ್ರೈಕ್ ರೇಟ್‌'ನಲ್ಲಿ 61 ರನ್ ಗಳಿಸಿರಬಹುದು. ಆದರೆ ಮುಂದಿನ ಪಂದ್ಯಗಳಲ್ಲಿ ಧೋನಿ ಸಿಡಿಯಲಿದ್ದಾರೆ ಎಂದು ರೈನಾ ತಿಳಿಸಿದ್ದಾರೆ.

ಕೋಲ್ಕತಾ(ಏ.21): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ವಿಶ್ವ ಶ್ರೇಷ್ಠ ಕ್ರಿಕೆಟಿಗನಾಗಿದ್ದು, ಅವರನ್ನು ಐಪಿಎಲ್ 10ನೇ ಆವೃತ್ತಿಯ ಟೂರ್ನಿಯಲ್ಲಿ ರೈಸಿಂಗ್ ಪುಣೆ ಸೂಪರ್‌'ಜೈಂಟ್ ತಂಡದ ನಾಯಕತ್ವದಿಂದ ತೆಗೆದದ್ದು ಸರಿಯಲ್ಲ ಎಂದು ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘‘ಧೋನಿ ಒಬ್ಬ ವಿಶ್ವಮಾನ್ಯ ಕ್ರಿಕೆಟಿಗ. ಅವರನ್ನು ನಾಯಕನ ಸ್ಥಾನದಿಂದ ಇಳಿಸಿದ್ದರಿಂದ ನಿಜಕ್ಕೂ ಬೇಸರವಾಗಿದೆ. ಧೋನಿ ಶ್ರೇಷ್ಠ ಆಟಗಾರ ಎಂದು ನಾನು ಮಾತ್ರ ಹೇಳುತ್ತಿಲ್ಲ. ಇದನ್ನು ವಿಶ್ವವೇ ಹೇಳುತ್ತಿದೆ’’ ಎಂದು ಎಡಗೈ ಬ್ಯಾಟ್ಸ್'ಮನ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಧೋನಿ 5 ಪಂದ್ಯಗಳಿಂದ 87ರ ಸ್ಟ್ರೈಕ್ ರೇಟ್‌'ನಲ್ಲಿ 61 ರನ್ ಗಳಿಸಿರಬಹುದು. ಆದರೆ ಮುಂದಿನ ಪಂದ್ಯಗಳಲ್ಲಿ ಧೋನಿ ಸಿಡಿಯಲಿದ್ದಾರೆ ಎಂದು ರೈನಾ ತಿಳಿಸಿದ್ದಾರೆ.