ಮುಂಬರುವ ಏಷ್ಯಾಕಪ್‌ಗೆ ಸಿದ್ಧತೆ ಆರಂಭಿಸುವ ದೃಷ್ಟಿಯಿಂದ ಧೋನಿ, ಬುಧವಾರ ಇಲ್ಲಿ ಬಾಲಿವುಡ್ ನಟರೊಂದಿಗೆ ಫುಟ್ಬಾಲ್ ಆಡುತ್ತಾ ಕಾಣಿಸಿಕೊಂಡರು. 

ಮುಂಬೈ[ಜು.27]: ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್ ಕ್ರಿಕೆಟ್ ಸರಣಿ ಮುಗಿಸಿಕೊಂಡು ಭಾರತಕ್ಕೆ ಹಿಂದಿರುಗಿರುವ ಎಂ.ಎಸ್.ಧೋನಿ ಸದ್ಯ ಬಿಡುವಿನ ಸಮಯವನ್ನು ಆನಂದಿಸುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂಬರುವ ಏಷ್ಯಾಕಪ್‌ಗೆ ಸಿದ್ಧತೆ ಆರಂಭಿಸುವ ದೃಷ್ಟಿಯಿಂದ ಧೋನಿ, ಬುಧವಾರ ಇಲ್ಲಿ ಬಾಲಿವುಡ್ ನಟರೊಂದಿಗೆ ಫುಟ್ಬಾಲ್ ಆಡುತ್ತಾ ಕಾಣಿಸಿಕೊಂಡರು. ‘ಧಡಕ್’ ಚಿತ್ರದ ಯುವ ನಟ ಇಶಾನ್ ಖಟ್ಟರ್ ಸೇರಿ ಇನ್ನೂ ಕೆಲ ನಟರೊಂದಿಗೆ ಧೋನಿ ಆಟವಾಡಿ ಕಾಲ ಕಳೆದರು.

ಭಾರತ ತಂಡವು ಇಂಗ್ಲೆಂಡ್ ಆಗಸ್ಟ್ 01ರಿಂದ ಆರಂಭವಾಗಲಿರುವ 5 ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ. ಧೋನಿ 2014ರಲ್ಲೇ ಟೆಸ್ಟ್ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದು, ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಾರೆ.