ಕೊಹ್ಲಿಗಿಂತ ಭಾರತೀಯರಿಗೆ ಧೋನಿಯೇ ಅಚ್ಚುಮೆಚ್ಚು..!

First Published 27, Jul 2018, 11:29 AM IST
MS Dhoni most popular Indian sportsperson ahead of Virat Kohli Sachin Tendulkar
Highlights

yougov.co.uk ಎನ್ನುವ ಇಂಗ್ಲೆಂಡ್‌ನ ವೆಬ್‌ಸೈಟ್‌ವೊಂದು ನಡೆಸಿದ್ದ ಸಮೀಕ್ಷೆಯಲ್ಲಿ ಧೋನಿಗೆ ಶೇ.7.7 ರಷ್ಟು ಮತಗಳು ಬಿದ್ದಿವೆ. ಶೇ.6.8ರಷ್ಟು ಮತಗಳನ್ನು ಪಡೆದಿರುವ ಸಚಿನ್ ತೆಂಡುಲ್ಕರ್ ಕ್ರೀಡಾಪಟುಗಳ ಪೈಕಿ 2ನೇ ಸ್ಥಾನ ಪಡೆದರೆ, ಒಟ್ಟಾರೆ 6ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಕೇವಲ ಶೇ.4.8ರಷ್ಟು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನವದೆಹಲಿ[ಜು.27]: ಭಾರತೀಯರು ಅತಿಹೆಚ್ಚು ಇಷ್ಟಪಡುವ ಕ್ರೀಡಾ ಸೆಲೆಬ್ರಿಟಿಗಳು ಯಾರು ಎನ್ನುವ ಸಮೀಕ್ಷೆಯಲ್ಲಿ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್‌ರನ್ನು ಹಿಂದಿಕ್ಕಿರುವ ಎಂ.ಎಸ್.ಧೋನಿ ಮೊದಲ ಸ್ಥಾನ ಪಡೆದಿದ್ದಾರೆ. ಇಷ್ಟೇ ಅಲ್ಲ, ಭಾರತೀಯರು ಅತಿಹೆಚ್ಚು ಇಷ್ಟಪಡುವ ವ್ಯಕ್ತಿಗಳ ಪಟ್ಟಿಯಲ್ಲಿ ಧೋನಿ 2ನೇ ಸ್ಥಾನ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ.

yougov.co.uk ಎನ್ನುವ ಇಂಗ್ಲೆಂಡ್‌ನ ವೆಬ್‌ಸೈಟ್‌ವೊಂದು ನಡೆಸಿದ್ದ ಸಮೀಕ್ಷೆಯಲ್ಲಿ ಧೋನಿಗೆ ಶೇ.7.7 ರಷ್ಟು ಮತಗಳು ಬಿದ್ದಿವೆ. ಶೇ.6.8ರಷ್ಟು ಮತಗಳನ್ನು ಪಡೆದಿರುವ ಸಚಿನ್ ತೆಂಡುಲ್ಕರ್ ಕ್ರೀಡಾಪಟುಗಳ ಪೈಕಿ 2ನೇ ಸ್ಥಾನ ಪಡೆದರೆ, ಒಟ್ಟಾರೆ 6ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಕೇವಲ ಶೇ.4.8ರಷ್ಟು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತಕ್ಕೆ ಟಿ20 ಹಾಗೂ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಧೋನಿ, ಟೆಸ್ಟ್‌ನಲ್ಲೂ ತಂಡ ನಂ.1 ಸ್ಥಾನ ಪಡೆಯಲು ಕಾರಣರಾಗಿದ್ದರು. 27 ಟೆಸ್ಟ್ ಗೆಲುವುಗಳ ಮೂಲಕ ಭಾರತದ ಯಶಸ್ವಿ ನಾಯಕ
ಎನಿಸಿಕೊಂಡಿರುವ ಧೋನಿ, ತಮ್ಮ ಸರಳತೆ ಹಾಗೂ ತಾಳ್ಮೆಯುತ ಸ್ವಭಾವದಿಂದಲೇ ಅತಿಹೆಚ್ಚು ಅಭಿಮಾನಿಗಳನ್ನು ಸೆಳೆದಿದ್ದಾರೆ. ಫುಟ್ಬಾಲ್ ತಾರೆಯರಾದ ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಲಿಯೋನೆಲ್ ಮೆಸ್ಸಿಗೂ ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ರೊನಾಲ್ಡೋ ಶೇ.2.6ರಷ್ಟು ಮತಗಳನ್ನು ಪಡೆದರೆ, ಮೆಸ್ಸಿ ಶೇ.2ರಷ್ಟು ಮತಗಳನ್ನು ಗಿಟ್ಟಿಸಿಕೊಂಡಿದ್ದಾರೆ.

loader