ಆಂಗ್ಲರ ವಿರುದ್ಧ ಇಂಡಿಯಾ ಎ ತಂಡವು ಜನವರಿ 10 ಹಾಗೂ 12 ರಂದು ಎರಡು ಪಂದ್ಯಗಳನ್ನು ಆಡಲಿದೆ. ಈ ವೇಳೆ ದೋನಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ನವದೆಹಲಿ(ಡಿ.07): ಸುಮಾರು ಎರಡೂವರೆ ತಿಂಗಳ ವಿಶ್ರಾಂತಿಯ ನಂತರ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಕಾಲಿಡುತ್ತಿರುವ ಟೀಂ ಇಂಡಿಯಾದ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಜ. 15ರಂದು ನಡೆಯಲಿರುವ ಆಂಗ್ಲರ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆಯಲಿರುವ ಎರಡು ಅಭ್ಯಾಸ ಪಂದ್ಯಗಳಲ್ಲಿ ಆಡಲಿದ್ದಾರೆಂದು ‘ಟೈಮ್ಸ್ ಆಫ್ ಇಂಡಿಯಾ’ ಹೇಳಿದೆ.

ಆಂಗ್ಲರ ವಿರುದ್ಧ ಇಂಡಿಯಾ ಎ ತಂಡವು ಜನವರಿ 10 ಹಾಗೂ 12 ರಂದು ಎರಡು ಪಂದ್ಯಗಳನ್ನು ಆಡಲಿದೆ. ಈ ವೇಳೆ ದೋನಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ದೀರ್ಘಕಾಲದ ವಿರಾಮದ ನಂತರ, ಯಾವುದೇ ಆಟಗಾರ ಅಂತಾರಾಷ್ಟ್ರೀಯ ಸರಣಿಯಲ್ಲಿ ಪಾಲ್ಗೊಳ್ಳುವ ಮುನ್ನ ಒಂದಾದರೂ ಪ್ರಥಮ ದರ್ಜೆ ಪಂದ್ಯವನ್ನಾಡಬೇಕೆಂಬ ನಿಯಮವನ್ನು ಧೋನಿ ಪಾಲಿಸಿಲ್ಲ ಎಂಬ ಟೀಕೆಗಳು ಎದ್ದ ಬೆನ್ನಲ್ಲೇ ಈ ವರದಿ ಹೊರಬಿದ್ದಿದೆ.

ಈ ನಡುವೆ ಧೋನಿ ಜಾರ್ಖಂಡ್ ರಣಜಿ ತಂಡದೊಂದಿಗೆ ಪ್ರತಿದಿನ ಅಭ್ಯಾಸ ಮಾಡುತ್ತಿದ್ದಾರೆ ಎಂದು ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಾಜೇಶ್ ಶರ್ಮಾ ಹೇಳಿದ್ದಾರೆ.