ನೂತನ ನಿಯಮ ಪ್ರಕಾರ ಬ್ಯಾಟ್ ಗಾತ್ರದಲ್ಲಿ ಸಾಕಷ್ಟು ವ್ಯತ್ಯಾಸವಾಗಲಿದೆ. ಬ್ಯಾಟ್'ನ ಉದ್ದ 108 ಎಂಎಂ, ಅಂಚುಗಳ ದಪ್ಪ 40 ಎಂಎಂ ಹಾಗೂ ಬ್ಲೇಡ್'ನ ದಪ್ಪ 67 ಎಂಎಂ ಮೀರುವಂತಿಲ್ಲ.
ನವದೆಹಲಿ(ಜು.20): ಒಂದೆಡೆ ಫಾರ್ಮ್'ಗೆ ಮರಳಲು ಒದ್ದಾಡುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಎಂಸಿಸಿ ಹೊಸ ನಿಯಮದ ಪ್ರಕಾರ ಧೋನಿ ತಮ್ಮ ಬ್ಯಾಟ್'ನ ಗಾತ್ರವನ್ನು ಕಡಿಮೆ ಮಾಡಿಕೊಳ್ಳಬೇಕಿದೆ.
ಮ್ಯಾರಿಲ್ಬೊರ್ನ್ ಕ್ರಿಕೆಟ್ ಕ್ಲಬ್(ಎಂಸಿಸಿ) ರೂಪಿಸಿರುವ ಹೊಸ ನಿಯಮಗಳ ಪ್ರಕಾರ ಬ್ಯಾಟ್'ನ ದಪ್ಪ 40 ಮಿಲಿ ಮೀಟರ್'ನಷ್ಟಿರಬೇಕು. ಅಕ್ಟೋಬರ್ 1ರಿಂದಲೇ ಈ ನೂತನ ನಿಯಮ ಜಾರಿಗೆ ಬರಲಿದೆ.
ಈ ನಿಟ್ಟಿನಲ್ಲಿ ಧೋನಿ ಮಾತ್ರವಲ್ಲದೇ ಡೇವಿಡ್ ವಾರ್ನರ್, ಕ್ರಿಸ್ ಗೇಲ್, ಕೀರನ್ ಪೊಲಾರ್ಡ್'ರಂತಹ ಘಟಾನುಘಟಿ ದಾಂಡಿಗರೂ ಕೂಡಾ ತಮ್ಮ ಬ್ಯಾಟ್'ನ ಗಾತ್ರ ಕಡಿಮೆ ಮಾಡಿಕೊಳ್ಳಬೇಕಿದೆ. ಸದ್ಯ ಧೋನಿ 45ಎಂಎಂ ಗಾತ್ರದ ಬ್ಯಾಟ್ ಬಳಸುತ್ತಿದ್ದಾರೆ. ಪೊಲಾರ್ಡ್, ವಾರ್ನರ್ ಸೇರಿದಂತೆ ಮತ್ತೆ ಕೆಲವರು 50 ಎಂಎಂಗಿಂತಲೂ ದಪ್ಪವಿರುವ ಬ್ಯಾಟ್'ಗಳನ್ನು ಬಳಕೆ ಮಾಡಿದ ಉದಾಹರಣೆಯಿದೆ.
ನೂತನ ನಿಯಮ ಪ್ರಕಾರ ಬ್ಯಾಟ್ ಗಾತ್ರದಲ್ಲಿ ಸಾಕಷ್ಟು ವ್ಯತ್ಯಾಸವಾಗಲಿದೆ. ಬ್ಯಾಟ್'ನ ಉದ್ದ 108 ಎಂಎಂ, ಅಂಚುಗಳ ದಪ್ಪ 40 ಎಂಎಂ ಹಾಗೂ ಬ್ಲೇಡ್'ನ ದಪ್ಪ 67 ಎಂಎಂ ಮೀರುವಂತಿಲ್ಲ.
ಇನ್ನೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ನಾಯಕ ಜೋ ರೂಟ್, ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್, 45 ಎಂಎಂಗಿಂತ ಕಡಿಮೆ ಗಾತ್ರದ ಬ್ಯಾಟ್ ಬಳಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಬ್ಯಾಟ್ ಮಾತ್ರ ನಿಯಮದ ಪ್ರಕಾರವೇ ಇದೆ.
