ರಾಂಚಿ(ಆ.04): ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಬಳಿಕ ತವರಿಗೆ ವಾಪಾಸ್ಸಾಗಿರುವ ಎಂ ಎಸ್ ಧೋನಿ, ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಗಷ್ಟೇ ಧೋನಿ ಸೈಕಲ್ ಏರಿ ಸ್ಟಂಟ್ ಪ್ರದರ್ಶಿಸಿದ್ದರು. ಇದೀಗ ಧೋನಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಜಾಹೀರಾತು ಶೂಟಿಂಗ್‌ಗಾಗಿ ಎಂ ಎಸ್ ಧೋನಿ ಡಿಫರೆಂಟ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜಾಹೀರಾತಿಗಾಗಿ ವಿವಿಧ ಪೋಸ್ ನೀಡಿರುವ ಧೋನಿ, ಬಾಲಿವುಡ್ ನಟರನ್ನೇ ನಾಚಿಸುವಂತೆ ನಟಿಸಿದ್ದಾರೆ.

ಧೋನಿಯ ಎಂಡೋರ್ಸ್‌ಮೆಂಟ್, ಜಾಹೀರಾತು ಸೇರಿದಂತೆ ಇತರ ವ್ಯವಹಾರಗಳನ್ನ ರಿತಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ನೋಡಿಕೊಳ್ಳುತ್ತಿದೆ. ಧೋನಿಯ ಆಪ್ತ ಅರುಣ್ ಪಾಂಡೆ ರೀತಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಮುಖ್ಯಸ್ಥರಾಗಿದ್ದಾರೆ.

ಇದೀಗ ನೂತನ ಜಾಹೀರಾತಿನಲ್ಲಿ ಎಂ ಎಸ್ ಧೋನಿ ಅಭಿಮಾನಿಗಳನ್ನ ಮಾತ್ರವಲ್ಲ,  ಗ್ರಾಹಕರನ್ನು ಮೋಡಿ ಮಾಡಲು ರೆಡಿಯಾಗಿದ್ದಾರೆ. ರಿತಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಧೋನಿ ಜಾಹೀರಾತು ಶೂಟಿಂಗ್ ಚಿತ್ರಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದೆ. ಆದರೆ ಕುರಿತು ಹೆಚ್ಚಿನ ವಿವರಗಳನ್ನ ಮಾತ್ರ ಬಹಿರಂಗ ಪಡಿಸಿಲ್ಲ.

ಇದನ್ನು ಓದಿ: ಸೈಕಲ್‌ನಲ್ಲಿ ರಜನಿಕಾಂತ್ ರೀತಿ ಸ್ಟಂಟ್ ಮಾಡಿದ ಎಂ ಎಸ್ ಧೋನಿ!

ಇದನ್ನು ಓದಿ: ಎಂ ಎಸ್ ಧೋನಿಯ ಹೊಸ ಹೇರ್ ಸ್ಟೈಲ್ ಹೇಗಿದೆ?