IPL 2018 ಡೆಲ್ಲಿ ಎದುರು ಇತಿಹಾಸ ನಿರ್ಮಿಸಿದ ಧೋನಿ

First Published 19, May 2018, 8:04 PM IST
MS Dhoni makes history during DD vs CSK game reaches 6000 runs in T20s
Highlights

ಡೆಲ್ಲಿ ಡೇರ್’ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಟಿ20 ಕ್ರಿಕೆಟ್’ನಲ್ಲಿ 6000 ರನ್ ಪೂರೈಸುವ ಮೂಲಕ, ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ ಎನ್ನುವ ದಾಖಲೆ ನಿರ್ಮಿಸಿದ್ದಾರೆ.

ನವದೆಹಲಿ[ಮೇ.19]: ವೃತ್ತಿ ಜೀವನದ ಸಂಧ್ಯಾಕಾಲದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಡೆಲ್ಲಿ ಡೇರ್’ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ವಿನೂತನ ದಾಖಲೆ ಬರೆದಿದ್ದಾರೆ.

ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು 2 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಧೋನಿ ಈ ಬಾರಿಯೂ ತಂಡವನ್ನು ಪ್ಲೇ ಆಫ್ ಹಂತಕ್ಕೇರಿಸಿದ್ದಾರೆ. ಡೆಲ್ಲಿ ಡೇರ್’ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಟಿ20 ಕ್ರಿಕೆಟ್’ನಲ್ಲಿ 6000 ರನ್ ಪೂರೈಸುವ ಮೂಲಕ, ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ ಎನ್ನುವ ದಾಖಲೆ ನಿರ್ಮಿಸಿದ್ದಾರೆ.

ಇದರ ಜೊತೆಗೆ ಟಿ20 ಕ್ರಿಕೆಟ್’ನಲ್ಲಿ 6000 ರನ್ ಪೂರೈಸಿದ ಭಾರತದ 5ನೇ ಬ್ಯಾಟ್ಸ್’ಮನ್ ಎನ್ನುವ ಗೌರವಕ್ಕೂ ಧೋನಿ ಪಾತ್ರರಾಗಿದ್ದಾರೆ. ಧೋನಿಗಿಂತ ಮೊದಲು ಸುರೇಶ್ ರೈನಾ[7708], ವಿರಾಟ್ ಕೊಹ್ಲಿ[7621], ರೋಹಿತ್ ಶರ್ಮಾ[7303] ಹಾಗೂ ಗೌತಮ್ ಗಂಭೀರ್[6402] ಈ ಸಾಧನೆ ಮಾಡಿದ್ದಾರೆ. ಧೋನಿ ಡೆಲ್ಲಿ ವಿರುದ್ಧ 10 ರನ್ ಗಳಿಸುತ್ತಿದ್ದಂತೆ 6000 ಸಾವಿರ ರನ್ ಗಡಿ ದಾಟಿದರು. 
 

loader