ಭಾನುವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಧೋನಿ ಸಿಡಿಸಿದ ಸಿಕ್ಸ್ ಕ್ರಿಕೆಟ್ ಪ್ರಿಯರಲ್ಲಿ ಹುಚ್ಚೆದು ಕುಣಿಯುವಂತೆ ಮಾಡಿತು.
ಬೆಂಗಳೂರು(ಏ.17): ಮಹೇಂದ್ರ ಸಿಂಗ್ ಧೋನಿ ಚುಟುಕು ಕ್ರಿಕೆಟ್'ಗೆ ಹೇಳಿ ಮಾಡಿಸಿದ ಆಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ. 10ನೇ ಆವೃತ್ತಿಯ ಐಪಿಎಲ್'ನ ಆರಂಭದ ಕೆಲಪಂದ್ಯಗಳಲ್ಲಿ ಮಾಹಿಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಬಹುತೇಕ ಮಂದಿ ಧೋನಿ ಕ್ರಿಕೆಟ್ ಭವಿಷ್ಯ ಮುಗಿದೇ ಹೋಯಿತು ಎಂದು ಭಾವಿಸಿದವರೇ ಆದರೆ ಭಾನುವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಧೋನಿ ಸಿಡಿಸಿದ ಸಿಕ್ಸ್ ಕ್ರಿಕೆಟ್ ಪ್ರಿಯರಲ್ಲಿ ಹುಚ್ಚೆದು ಕುಣಿಯುವಂತೆ ಮಾಡಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ನಡುವೆ ನಡೆದ ಪಂದ್ಯದಲ್ಲಿ ಆರ್'ಸಿಬಿ ಬೌಲರ್ ಯಜುವೇಂದ್ರ ಚಾಹಲ್ ಎಸೆತವನ್ನು ಬಲಿಷ್ಟ ಹೊಡೆತದ ಮೂಲಕ ಮೈದಾನದ ಹೊರಗೆ ಕಳಿಸುವಲ್ಲಿ ಮಾಹಿ ಯಶಸ್ವಿಯಾದರು. ಈ ಸಿಕ್ಸರ್ ಬಗ್ಗೆ ವೀಕ್ಷಕ ವಿವರಣೆ ಮಾಡುವವರು ಚೆಂಡು ಕಬ್ಬನ್ ಪಾರ್ಕ್'ಗೆ ಹೋಯಿತು ಎಂದು ಉದ್ಘರಿಸಿದರು.
ಚೆಂಡು ಸ್ಟೇಡಿಯಂ ಛಾವಣಿಯಲ್ಲಿ ಸಿಕ್ಕಿಕೊಂಡಿದ್ದರಿಂದ ಹೊಸ ಚೆಂಡನ್ನು ನಂತರ ಬಳಸಬೇಕಾಗಿ ಬಂತು...
