ಗುರುಗ್ರಾಮ[ಮೇ.18]: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಗೋಸ್ಕರ ಈ ಬಾರಿಯ ಐಪಿಎಲ್ ಟ್ರೋಫಿ ಗೆಲ್ಲಬೇಕಿದೆ ಎಂದು ಸಿಎಸ್‌ಕೆ ತಂಡದ ಆರಂಭಿಕ ಸುರೇಶ್ ರೈನಾ ಹೇಳಿದ್ದಾರೆ. 

ಈ ಕುರಿತು ಹೇಳಿಕೆ ನೀಡಿರುವ ರೈನಾ, ‘ಪ್ರಸಕ್ತ ಆವೃತ್ತಿ ಆರಂಭಕ್ಕೂ ಮುನ್ನ ಧೋನಿ ಅತ್ಯಂತ ಭಾವುಕರಾಗಿದ್ದರು. ಸಿಎಸ್‌ಕೆ ಬಗ್ಗೆ ಅಪಾರ ಕಾಳಜಿ ಹೊಂದಿರುವ ಧೋನಿ, ಐಪಿಎಲ್ ಆರಂಭದಿಂದಲೂ ಚೆನ್ನೈ ತಂಡವನ್ನು ಮುನ್ನಡೆಸುತ್ತ ಬಂದಿದ್ದಾರೆ. ಧೋನಿ ಸಾಕಷ್ಟು ಬಾರಿ ಟೀಕೆಗಳನ್ನು ಎದುರಿಸಿದ್ದಾರೆ. ಆದರೆ ಟೀಕೆಗಳಿಗೆ ತಮ್ಮ ಪ್ರದರ್ಶನದ ಮೂಲಕವೇ ಉತ್ತರ ನೀಡಿದ್ದಾರೆ. ದೇವರ ಆಶೀರ್ವಾದದಿಂದ ಈ ಬಾರಿ ಟ್ರೋಫಿ ಎತ್ತಿ ಹಿಡಿಯುತ್ತೇವೆ’ ಎಂದಿದ್ದಾರೆ.

2 ವರ್ಷಗಳ ನಿಷೇಧದ ಬಳಿಕ ಐಪಿಎಲ್’ಗೆ ಭರ್ಜರಿಯಾಗಿ ಕಮ್’ಬ್ಯಾಕ್ ಮಾಡಿರುವ ಚೆನ್ನೈ ಸೂಪರ್’ಕಿಂಗ್ಸ್, ಪ್ರಸ್ತುತ ಅಂಕಪಟ್ಟಿಯಲ್ಲಿ 8 ಗೆಲುವು ಹಾಗೂ 4 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು ಪ್ಲೇ ಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ.