ಮಹೇಂದ್ರ ಸಿಂಗ್​ ಧೋನಿ ತುಂಬಾ ಇಂಟಲಿಜೆಂಟ್​ ಆಟಗಾರ. ಪಂದ್ಯದ ವೇಳೆ ಸಂದಿಗ್ಧ ಸ್ಥಿತಿ ಎದುರಾದಾಗ ನನ್ನಿಂದ ಸಲಹೆ ತೆಗೆದುಕೊಳ್ಳುವುದರಲ್ಲಿ ಹಿಂದೆಮುಂದೆ ನೋಡುತ್ತಿರಲಿಲ್ಲ ಎಂದು ಕೊಹ್ಲಿ ಧೋನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂಬೈ (ಜ.14): ಮಹೇಂದ್ರ ಸಿಂಗ್​ ಧೋನಿ ತುಂಬಾ ಇಂಟಲಿಜೆಂಟ್​ ಆಟಗಾರ. ಪಂದ್ಯದ ವೇಳೆ ಸಂದಿಗ್ಧ ಸ್ಥಿತಿ ಎದುರಾದಾಗ ನನ್ನಿಂದ ಸಲಹೆ ತೆಗೆದುಕೊಳ್ಳುವುದರಲ್ಲಿ ಹಿಂದೆಮುಂದೆ ನೋಡುತ್ತಿರಲಿಲ್ಲ ಎಂದು ಕೊಹ್ಲಿ ಧೋನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಲ್ಲ ಒತ್ತಡಗಳನ್ನು ತಡೆಹಿಡಿದು ಆಟವಾಡಿದ್ದರು ಎಂದು ಮಾಜಿ ನಾಯಕ ಧೋನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೊಹ್ಲಿ ಟೀಂ ಇಂಡಿಯಾ ಆಟಗಾರರೆಲ್ಲರೂ ಸಮರ್ಥರಾಗಿದ್ದಾರೆ ಎಂದು ಪುಣೆಯಲ್ಲಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹೇಳಿದ್ದಾರೆ.

ಟೀಂ ಇಂಡಿಯಾ - ಇಂಗ್ಲೇಂಡ್​ ನಡುವೆ ಏಕದಿನ ಪಂದ್ಯ ನಾಳೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿದೆ. ವಿರಾಟ್​ ಕೊಹ್ಲಿ ನಾಯಕತ್ವದ ಮೊದಲ ಪಂದ್ಯ ಇದಾಗಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.