ಅಭಿಮಾನಿಗೆ ಎಂ ಎಸ್ ಧೋನಿ ಕೀಪಿಂಗ್ ಗ್ಲೌಸ್ ಗಿಫ್ಟ್ ನೀಡಿದ್ದೇಕೆ?

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 18, Jul 2018, 3:24 PM IST
MS Dhoni gifted his gloves to a fan while boarding the bus
Highlights

ಎಂ ಎಸ್ ಧೋನಿ ಕ್ರಿಕೆಟ್‌ಗೆ ವಿದಾಯ  ಹೇಳ್ತಾರ? ಧೋನಿ ನಿವೃತ್ತಿ ಮಾತುಗಳು ಬಲವಾಗುತ್ತಿದೆ. ಅಂತಿಮ ಪಂದ್ಯದ ನೆನಪಿಗಾಗಿ ಚೆಂಡು ಪಡೆದಿದ್ದಾರೆ ಅನ್ನೋ ಅಭಿಪ್ರಾಯದ ನಡುವೆ ಇದೀಗ ಎಂ ಎಸ್ ಧೋನಿ ತಮ್ಮ ಗ್ಲೌಸ್‌ನ್ನ ಅಭಿಮಾನಿಗೆ ಗಿಫ್ಟ್ ನೀಡಿದ್ದಾರೆ. ಇದು ಧೋನಿ ನಿವೃತ್ತಿ ಸೂಚನೆಯಾ? ಇಲ್ಲಿದೆ ವಿವರ.

ಲೀಡ್ಸ್(ಜು.18): ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ ನಡೆದ ಹಲವು ಘಟನೆಗಳು ಟೀಂ ಇಂಡಿಯಾ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಎಂ ಎಸ್ ಧೋನಿ ಶೀಘ್ರದಲ್ಲೇ ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತುಗಳಿಗೆ ಪುಷ್ಠಿ  ನೀಡುತ್ತಿದೆ.

ಇದನ್ನು ಓದಿ: ನಿವೃತ್ತಿಗೆ ಸಜ್ಜಾದ್ರಾ ಎಂ ಎಸ್ ಧೋನಿ ?

ಅಂತಿಮ ಪಂದ್ಯದ ಬಳಿಕ ಅಂಪೈರ್‌ನಿಂದ ಚೆಂಡು ಪಡೆದ ಎಂ ಎಸ್ ಧೋನಿ ಹೊಟೆಲ್‌ಗೆ ತೆರಳಲು ಟೀಂ ಇಂಡಿಯಾ ಬಸ್ ಬಳಿ ಬಂದಿದ್ದಾರೆ. ಈ ವೇಳೆ ಧೋನಿಗೆ ಚಿಯರ್ ಅಪ್ ಮಾಡುತ್ತಿದ್ದ  ಅಭಿಮಾನಿಗೆ ತಮ್ಮ ಕೀಪಿಂಗ್ ಗ್ಲೌಸ್ ಗಿಫ್ಟ್ ನೀಡಿದ್ದಾರೆ. ಇದು ಧೋನಿ ನಿವೃತ್ತಿಗೆ ಮತ್ತೊಂದು ಸೂಚನೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

 

3ನೇ ಏಕದಿನ ಸೋಲಿನ ಬಳಿಕ ಎಂ ಎಸ್ ಧೋನಿ ಅಂಪೈರ್ ಬಳಿಯಿಂದ ಚೆಂಡನ್ನ ಕೇಳಿ ಪಡೆದುಕೊಂಡರು. ತಮ್ಮ ಕರಿಯರ್‌ನ ಅಂತಿಮ ಪಂದ್ಯದ ನೆನಪಿಗಾಗಿ ಧೋನಿ ಬಾಲ್ ಪಡೆದುಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. 

 

 

loader