ಇಂಧೂರ್'ನಲ್ಲಿ ನಡೆಯುವ 2ನೇ ಟಿ20 ಪಂದ್ಯದಲ್ಲಿ ಎದುರಾಳಿಗಳ 3 ಕ್ಯಾಚುಗಳನ್ನು ಕೈಗೆ ಸೇರಿಸಿಕೊಂಡರೆ ಮತ್ತೊಂದು ಹೊಸ ದಾಖಲೆ ಬರೆದಂತಾಗುತ್ತದೆ.
ಇಂಧೋರ್(ಡಿ.22): ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏಕದಿನ ಹಾಗೂ ಟಿ20 ವಿಶ್ವಕಪ್(2007ಟಿ20 ಹಾಗೂ 2011ರ ಏಕದಿನ) ಜಯಿಸಿರುವ ಏಕೈಕ ಭಾರತದ ನಾಯಕ ಧೋನಿ.
ಭಾರತದ ಈ ಸ್ಫೋಟಕ ಆಟಗಾರ ಮತ್ತೊಂದು ವಿನೂತನ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಕೇವಲ 3 ಕ್ಯಾಚುಗಳನ್ನು ತಮ್ಮ ಮುಡಿಗೆ ಸೇರ್ಪಡಿಸಿಕೊಂಡರೆ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ 50 ಕ್ಯಾಚ್ ಕಬಳಿಸಿದ ವಿಕೇಟ್ ಕೀಪರ್ ಇವರಾಗುತ್ತಾರೆ. ಧೋನಿ 84 ಟಿ20 ಪಂದ್ಯಗಳಿಂದ 47 ಕ್ಯಾಚುಗಳನ್ನು ಹಿಡಿದಿದ್ದಾರೆ. ಇಂಧೂರ್'ನಲ್ಲಿ ನಡೆಯುವ 2ನೇ ಟಿ20 ಪಂದ್ಯದಲ್ಲಿ ಎದುರಾಳಿಗಳ 3 ಕ್ಯಾಚುಗಳನ್ನು ಕೈಗೆ ಸೇರಿಸಿಕೊಂಡರೆ ಮತ್ತೊಂದು ಹೊಸ ದಾಖಲೆ ಬರೆದಂತಾಗುತ್ತದೆ.
ಟಿ20ಯಲ್ಲಿ ಅತೀ ಹೆಚ್ಚು ಕ್ಯಾಚು ಹಿಡಿದವರಲ್ಲಿ ಧೋನಿ ಮೊದಲ ಸ್ಥಾನದಲ್ಲಿದ್ದರೆ ವೆಸ್ಟ್ ಇಂಡೀಸಿನ ದಿನೇಶ್ ರಾಮ್'ದಿನ್ ಮೂರನೇ ಸ್ಥಾನದಲ್ಲಿ ಕಮ್ರಾನ್ ಅಕ್ಮಲ್ ಇದ್ದಾರೆ. ಕಟಕ್'ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ 22 ಎಸತಗಳಲ್ಲಿ 39 ರನ್ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
