Asianet Suvarna News Asianet Suvarna News

ಐಪಿಎಲ್’ನಲ್ಲಿ 100 ಬಲಿ ಪಡೆದ ಧೋನಿ

ಐಪಿಎಲ್’ನಲ್ಲಿ 157 ಪಂದ್ಯಗಳನ್ನಾಡಿರುವ ಎಂ.ಎಸ್. ಧೋನಿ 71 ಕ್ಯಾಚ್ ಹಾಗೂ 30 ಸ್ಟಂಪಿಂಗ್’ಗಳನ್ನು ಮಾಡಿದ್ದಾರೆ.

MS Dhoni Cracks a new record
  • Facebook
  • Twitter
  • Whatsapp

ಪುಣೆ(ಮೇ.15): ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪುಣೆ ಸೂಪರ್’ಜೈಂಟ್ಸ್ ತಂಡದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಐಪಿಎಲ್’ನಲ್ಲಿ 100 ಬ್ಯಾಟ್ಸ್’ಮನ್’ಗಳನ್ನು ಬಲಿಪಡೆದ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಭಾನುವಾರ ನಡೆದ ಕಿಂಗ್ಸ್ ಇಲೆವನ್ ಪಂಜಾಬ್ ಎದುರಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ ಕ್ಯಾಚ್ ಹಿಡಿದ ಧೋನಿ ಈ ಮೈಲಿಗಲ್ಲು ಸ್ಥಾಪಿಸಿದರು. ಈ ಮೂಲಕ ಐಪಿಎಲ್’ನಲ್ಲಿ ಈ ಸಾಧನೆ ಮಾಡಿದ ಎರಡನೇ ವಿಕೆಟ್ ಕೀಪರ್ ದಾಖಲೆಗೆ ಪಾತ್ರರಾದರು.

ಐಪಿಎಲ್’ನಲ್ಲಿ 157 ಪಂದ್ಯಗಳನ್ನಾಡಿರುವ ಎಂ.ಎಸ್. ಧೋನಿ 71 ಕ್ಯಾಚ್ ಹಾಗೂ 30 ಸ್ಟಂಪಿಂಗ್’ಗಳನ್ನು ಮಾಡಿದ್ದಾರೆ.

ಇನ್ನು ದಿನೇಶ್ ಕಾರ್ತಿಕ್ ಈವರೆಗೆ 152 ಪಂದ್ಯಗಳನ್ನಾಡಿದ್ದು 88 ಕ್ಯಾಚ್ ಹಾಗೂ 26 ಸ್ಟಂಪಿಂಗ್ಸ್’ನೊಂದಿಗೆ ಒಟ್ಟು 106 ಬಲಿ ಪಡೆದು ಅಗ್ರ ಸ್ಥಾನದಲ್ಲಿದ್ದಾರೆ.

 

Follow Us:
Download App:
  • android
  • ios