ಚೆನ್ನೈನಿಂದ CSK ಮ್ಯಾಚ್'ಗಳು ಪುಣೆಗೆ ಶಿಫ್ಟ್ ಆಗಿದ್ದೇಕೆ..? ಇಲ್ಲಿದೆ ಇಂಟರೆಸ್ಟಿಂಗ್ ರೀಸನ್..!

First Published 12, Apr 2018, 5:03 PM IST
MS Dhoni comfort 1 of the major reasons for Pune switch for CSK home games
Highlights

ಕಳೆದ 2 ಆವೃತ್ತಿಗಳಲ್ಲಿ ಧೋನಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರವಾಗಿ ಕಣಕ್ಕಿಳಿದಿದ್ದರು. ಆದಕಾರಣ ಅಲ್ಲಿನ ವಾತಾವರಣಕ್ಕೆ ಅವರು ಒಗ್ಗಿಕೊಂಡಿರುವ ಕಾರಣ ಚೆನ್ನೈ ತವರನ್ನು ಅಲ್ಲಿಗೆ ಸ್ಥಳಾಂತರಗೊಳಿಸಲು ಅವರ ಸಮ್ಮತಿ ಇದೆ ಎನ್ನಲಾಗಿದೆ.

ಚೆನ್ನೈ(ಏ.12): ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರವಾಗಿ ತಮಿಳುನಾಡಿನಲ್ಲಿ ಪ್ರತಿಭಟನೆ ಕಾವು ಜೋರಾಗಿರುವ ಹಿನ್ನಲೆಯಲ್ಲಿ ಚೆನ್ನೈನಲ್ಲಿ ನಡೆಯಬೇಕಿದ್ದ 6 ಪಂದ್ಯಗಳೀಗ ಪುಣೆಗೆ ಸ್ಥಳಾಂತರಗೊಂಡಿವೆ.

ಈಗಾಗಲೇ ಬಿಸಿಸಿಐ ಪುಣೆ ಜತೆಗೆ ವಿಶಾಖಪಟ್ಟಣ, ತಿರುವನಂತಪುರ ಹಾಗೂ ರಾಜ್‌'ಕೋಟ್ ಸೇರಿದಂತೆ ನಾಲ್ಕು ನಗರಗಳನ್ನು ಅಂತಿಮಗೊಳಿಸಿತ್ತು. ಇವುಗಳಲ್ಲಿ ಪುಣೆ ನಗರದ ಮೇಲೆ ಧೋನಿ ಒಲವು ತೋರಿದರು ಎಂದು ತಿಳಿದು ಬಂದಿದೆ. ಏಕೆಂದರೆ ಕಳೆದ 2 ಆವೃತ್ತಿಗಳಲ್ಲಿ ಧೋನಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರವಾಗಿ ಕಣಕ್ಕಿಳಿದಿದ್ದರು. ಆದಕಾರಣ ಅಲ್ಲಿನ ವಾತಾವರಣಕ್ಕೆ ಅವರು ಒಗ್ಗಿಕೊಂಡಿರುವ ಕಾರಣ ಚೆನ್ನೈ ತವರನ್ನು ಅಲ್ಲಿಗೆ ಸ್ಥಳಾಂತರಗೊಳಿಸಲು ಅವರ ಸಮ್ಮತಿ ಇದೆ ಎನ್ನಲಾಗಿದೆ.

‘ವಿಶಾಖಪಟ್ಟಣದಿಂದ ದೆಹಲಿಗೆ ಕೆಲವೇ ಕೆಲವು ನೇರ ವಿಮಾನಗಳಿದ್ದು, ಆಟಗಾರರು ದೆಹಲಿಗೆ ತೆರಳಬೇಕಿದ್ದರೆ ಇಂದೋರ್'ಗೆ ಹೋಗಿ ಅಲ್ಲಿಂದ ದೆಹಲಿಗೆ ತಲುಪಬೇಕಿತ್ತು. ಆದಕಾರಣ ಪುಣೆಯಿಂದ ಉತ್ತಮ ವಿಮಾನ ವ್ಯವಸ್ಥೆಯಿರುವುದು ಧೋನಿಗೆ ತಿಳಿದಿತ್ತು. ಇದೇ ಕಾರಣದಿಂದ ಚೆನ್ನೈ ತನ್ನ ತವರನ್ನು ಪುಣೆ ಸ್ಥಳಾಂತರಿಸಲು ಸಮ್ಮತಿ ಸೂಚಿಸಿತು’ ಎಂದು ಮೂಲಗಳು ತಿಳಿಸಿವೆ.

loader