Asianet Suvarna News Asianet Suvarna News

ವಿಸ್ಡನ್'ನ ಸಾರ್ವಕಾಲಿಕ ಟೀಂ ಇಂಡಿಯಾ ಕ್ಯಾಪ್ಟನ್ ಧೋನಿ, ಕೊಹ್ಲಿಗಿಲ್ಲ ಸ್ಥಾನ

MS Dhoni captain of Wisden  all time Indian Test XI

ನವದೆಹಲಿ(ಸೆ.21): ಭಾರತ ಕ್ರಿಕೆಟ್‌ ತಂಡ ಅತ್ಯಂತ ಯಶಸ್ವಿ ಕಪ್ತಾನ ಎಂ.ಎಸ್‌. ಧೋನಿ ಪ್ರಮುಖ ಕ್ರಿಕೆಟ್‌ ಮ್ಯಾಗಜೀನ್‌ ವಿಸ್ಡನ್‌ ಹೆಸರಿಸಿರುವ ಸಾರ್ವಕಾಲಿಕ ಭಾರತ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಗುರುವಾರ ನ್ಯೂಜಿಲೆಂಡ್‌ ವಿರುದ್ಧ ಆರಂಭವಾಗುತ್ತಿರುವ ಮೂರು ಟೆಸ್ಟ್‌ ಸರಣಿಯ ಮೊದಲ ಪಂದ್ಯವು ಟೀಂ ಇಂಡಿಯಾ ಪಾಲಿಗೆ 500ನೇ ಟೆಸ್ಟ್‌ ಪಂದ್ಯವಾಗಿರುವ ಹಿನ್ನೆಲೆಯಲ್ಲಿ ವಿಸ್ಡನ್‌ ತಂಡವನ್ನು ಪ್ರಕಟಿಸಿದ್ದು, ಮಾಜಿ ಆಟಗಾರರಾದ ಸುನೀಲ್‌ ಗವಾಸ್ಕರ್‌, ಕಪಿಲ್‌ ದೇವ್‌ ಕೂಡ ಸ್ಥಾನ ಗಳಿಸಿದ್ದರೆ, ಕರ್ನಾಟಕದಿಂದ ರಾಹುಲ್‌ ದ್ರಾವಿಡ್‌ ಮತ್ತು ಅನಿಲ್‌ ಕುಂಬ್ಳೆ ಮತ್ತು ಜಾವಗಲ್‌ ಶ್ರೀನಾಥ್‌ ಸ್ಥಾನ ಗಿಟ್ಟಿಸಿದ್ದಾರೆ.

ಇದಕ್ಕೂ ಮುನ್ನ 500ನೇ ಪಂದ್ಯದ ಹಿನ್ನೆಲೆಯಲ್ಲಿ ತಮ್ಮ ಕನಸಿನ ತಂಡದ ಕುರಿತಾದ ಚುನಾವಣೆಯಲ್ಲಿ ಕ್ರಿಕೆಟ್‌ ಆಸ್ಪ್ರೇಲಿಯಾ 50 ಸಾವಿರ ಅಭಿಮಾನಿಗಳಿಂದ ಮತಗಳನ್ನು ಪಡೆದಿತ್ತು.

ವಿಸ್ಡನ್‌ ಟೆಸ್ಟ್‌ ಇಲೆವೆನ್‌

ಸುನೀಲ್‌ ಗವಾಸ್ಕರ್‌, ವಿರೇಂದ್ರ ಸೆಹ್ವಾಗ್‌, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌, ವಿವಿಎಸ್‌ ಲಕ್ಷ್ಮಣ್‌, ಕಪಿಲ್‌ ದೇವ್‌, ಎಂ.ಎಸ್‌. ಧೋನಿ (ವಿಕೆಟ್‌ ಕೀಪರ್‌ / ನಾಯಕ), ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌, ಜಹೀರ್‌ ಖಾನ್‌, ಬಿಶನ್‌ ಸಿಂಗ್‌ ಬೇಡಿ, ಮೊಹಮದ್‌ ಅಜರುದ್ದೀನ್‌ (12ನೇ ಆಟಗಾರ).

ಕ್ರಿಕೆಟ್‌ ಆಸ್ಪ್ರೇಲಿಯಾ ಇಲೆವೆನ್

ಸುನೀಲ್‌ ಗವಾಸ್ಕರ್‌, ವಿರೇಂದ್ರ ಸೆಹ್ವಾಗ್‌, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌, ವಿವಿಎಸ್‌ ಲಕ್ಷ್ಮಣ್‌, ಸೌರವ್‌ ಗಂಗೂಲಿ, ಎಂ.ಎಸ್‌. ಧೋನಿ (ವಿಕೆಟ್‌ಕೀಪರ್‌ / ನಾಯಕ), ಕಪಿಲ್‌ ದೇವ್‌, ಅನಿಲ್‌ ಕುಂಬ್ಳೆ, ಹರ್ಭಜನ್‌ ಸಿಂಗ್‌ ಮತ್ತು ಜಹೀರ್‌ಖಾನ್‌.

Follow Us:
Download App:
  • android
  • ios