ಕನ್ನಡಿಗ ಪಾಂಡೆ ಮೇಲೆ ಕೆಂಡಾಮಂಡಲವಾದ ಧೋನಿ..! ಅಷ್ಟಕ್ಕೂ ಆಗಿದ್ದೇನು..?

sports | Thursday, February 22nd, 2018
Suvarna Web Desk
Highlights

ಮನೀಶ್ ಪಾಂಡೆ 20ನೇ ಓವರ್'ನ ಮೊದಲ ಎಸೆತದಲ್ಲಿ ಮಿಡ್'ವಿಕೆಟ್'ನತ್ತ ಚೆಂಡನ್ನು ಬಾರಿಸಿ ಕೇವಲ ಒಂದು ರನ್ ಗಳಿಸಿದರು. ಧೋನಿ ಆ ಎಸೆತದಲ್ಲಿ 2 ರನ್ ಓಡಲು ಸಿದ್ದರಿದ್ದರು. ಆದರೆ ಚೆಂಡಿನತ್ತ ಸರಿಯಾಗಿ ಗಮನ ಹರಿಸದ ಪಾಂಡೆ ಕೇವಲ ಒಂದು ರನ್'ಗೆ ತೃಪ್ತಿಪಟ್ಟುಕೊಂಡರು. ಆಗ ಮನೀಶ್‌'ರನ್ನು ಕಂಡು ಕೋಪಗೊಂಡ ಧೋನಿ, ‘ಅಲ್ಲಿ ಇಲ್ಲಿ ನೋಡಬೇಡ. ಈ ಕಡೆ ಗಮನ ಇರಲಿ’ ಎಂದು ಬೈದಿದ್ದಾರೆ ಎನ್ನಲಾಗಿದೆ.

ಸೆಂಚುರಿಯನ್(ಫೆ.22): ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್ ಧೋನಿ ಮೈದಾನದಲ್ಲಿ ಸಿಟ್ಟಾಗುವುದು ತೀರಾ ಅಪರೂಪ. ದಶಕಗಳ ಕಾಲ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಕನ್ನಡಿಗ ಮನೀಶ್ ಪಾಂಡೆ ವಿರುದ್ಧ ಸಿಡಿಮಿಡಿಗೊಂಡಿದ್ದರು. ಆ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಅಷ್ಟಕ್ಕೂ ಆಗಿದ್ದೇನು:

ಮನೀಶ್ ಪಾಂಡೆ 20ನೇ ಓವರ್'ನ ಮೊದಲ ಎಸೆತದಲ್ಲಿ ಮಿಡ್'ವಿಕೆಟ್'ನತ್ತ ಚೆಂಡನ್ನು ಬಾರಿಸಿ ಕೇವಲ ಒಂದು ರನ್ ಗಳಿಸಿದರು. ಧೋನಿ ಆ ಎಸೆತದಲ್ಲಿ 2 ರನ್ ಓಡಲು ಸಿದ್ದರಿದ್ದರು. ಆದರೆ ಚೆಂಡಿನತ್ತ ಸರಿಯಾಗಿ ಗಮನ ಹರಿಸದ ಪಾಂಡೆ ಕೇವಲ ಒಂದು ರನ್'ಗೆ ತೃಪ್ತಿಪಟ್ಟುಕೊಂಡರು. ಆಗ ಮನೀಶ್‌'ರನ್ನು ಕಂಡು ಕೋಪಗೊಂಡ ಧೋನಿ, ‘ಅಲ್ಲಿ ಇಲ್ಲಿ ನೋಡಬೇಡ. ಈ ಕಡೆ ಗಮನ ಇರಲಿ’ ಎಂದು ಬೈದಿದ್ದಾರೆ ಎನ್ನಲಾಗಿದೆ.

ಧೋನಿ-ಪಾಂಡೆ ಜೋಡಿ 5ನೇ ವಿಕೆಟ್'ಗೆ ಮುರಿಯದ 98 ರನ್' ಕಲೆಹಾಕಿತಾದರೂ, ಆಫ್ರಿಕಾ ಪರ ಕ್ಲಾಸೆನ್ ಹಾಗೂ ಜೆಪಿ ಡುಮಿನಿ ಆಕರ್ಷಕ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ಸುಲಭವಾಗಿ ಜಯದ ನಗೆ ಬೀರಿತು. ಇದೀಗ 3 ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದು, ಕೊನೆಯ ಹಾಗೂ ನಿರ್ಣಾಯಕ ಪಂದ್ಯವು ಫೆ.24ರಂದು ಕೇಪ್'ಟೌನ್'ನಲ್ಲಿ ಜರುಗಲಿದೆ.

Comments 0
Add Comment

  Related Posts

  Dhoni Received Padma Bhushan

  video | Tuesday, April 3rd, 2018

  Dhoni Received Padma Bhushan

  video | Tuesday, April 3rd, 2018

  Election War Modi Vs Siddu

  video | Thursday, March 15th, 2018

  BSY Vs Siddaramaiah

  video | Tuesday, February 27th, 2018

  Dhoni Received Padma Bhushan

  video | Tuesday, April 3rd, 2018
  Suvarna Web Desk