ರಾಂಚಿ(ನ.26): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಸದ್ಯ ವಿಶ್ರಾಂತಿಗೆ ಜಾರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿರುವ ಧೋನಿ, ಸಿಕ್ಕಿರುವ ಸಮಯವನ್ನ ಪುತ್ರಿ ಝಿವಾ ಧೋನಿ ಜೊತೆ ಕಾಲಕಳೆಯುತ್ತಿದ್ದಾರೆ.

ಧೋನಿ ಹಾಗೂ ಝಿವಾ ನಡುವಿನ ಸಂಭಾಷಣೆ ಇದೀಗ ಎಲ್ಲರ ಗಮನಸೆಳೆದಿದೆ. ಕಾರಣ ಧೋನಿ ಹಾಗು ಝಿವಾ ಭೋಜ್‌ಪುರಿ ಹಾಗೂ ತಮಿಳು ಭಾಷೆಯಲ್ಲಿ ಮಾತುಕತೆ ನಡೆಸೋ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 
 
 
 
 
 
 
 
 
 
 
 
 

Greetings in two language

A post shared by M S Dhoni (@mahi7781) on Nov 24, 2018 at 6:08am PST

 

ಭೋಜ್‌ಪುರಿ ಹಾಗೂ ತಮಿಳು ಭಾಷೆಯಲ್ಲಿ ಪುತ್ರಿ ಝಿವಾ ಹೇಗಿದ್ದೀರಿ ಎಂದು ಕೇಳಿದ್ದಾಳೆ. ಇದಕ್ಕೆ ಧೋನಿ ಕೂಡ ಎರಡೂ ಭಾಷೆಯಲ್ಲಿ ಉತ್ತರಿಸಿದ್ದಾರೆ.  ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಮುನ್ನಡೆಸುವ ಎಂ.ಎಸ್.ಧೋನಿ ಈಗಾಗಲೇ ತಮಿಳು ಭಾಷೆಯಲ್ಲಿ ಹಲವು ಬಾರಿ ಮಾತನಾಡಿದ್ದಾರೆ. ಇದೀಗ ಭೋಜ್‌ಪುರಿ ಕೂಡ ಕಲಿತಿದ್ದಾರೆ.

ಇದನ್ನೂ ಓದಿ: ಐಪಿಎಲ್‌ನಿಂದ ತಮಿಳು ಕಲೀತಿದ್ದಾರೆ ಧೋನಿ- ಕೊಹ್ಲಿ ಕನ್ನಡ ಕಲೀತಾರ?

ಧೋನಿ ಮಾತ್ರವಲ್ಲ ಪುತ್ರಿ ಝಿವಾ ಕೂಡ ಇದೀಗ ಬೋಜ್‌ಪುರಿ ಹಾಗೂ ತಮಿಳು ಕಲಿತಿರುವುದು ವಿಶೇಷ. ಈ ಹಿಂದೆ ಝಿವಾ ಮಲೆಯಾಳಂ ಭಾಷೆಯಲ್ಲಿ ಹಾಡು ಕೂಡ ಹಾಡಿದ್ದರು.