ವಾರ್ನರ್'ಗೆ ತಾವು ಔಟ್ ಎಂದು ಗೊತ್ತಿದ್ದರೂ ಕ್ರೀಡಾಸ್ಪೂರ್ತಿಯಿಂದ ಪೆವಿಲಿಯನ್'ನತ್ತ ಹೆಜ್ಜೆಹಾಕುವ ಬದಲು ಬ್ಯಾಟಿಂಗ್ ಮುಂದುವರೆಸಿದ್ದು ಸಾಕಷ್ಟು ಟೀಕೆಗೆ ಗುರಿಯಾಗಿದೆ...

ಬೆಂಗಳೂರು(ಮೇ.14): ಗ್ರೀನ್ ಪಾರ್ಕ್'ನಲ್ಲಿ ಕಾನ್ಪುರದಲ್ಲಿ ನಡೆದ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್'ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಕ್ರೀಡಾಸ್ಪೂರ್ತಿ ಮರೆತರ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಗುಜರಾತ್ ಲಯನ್ಸ್ ನೀಡಿದ್ದ 154ರನ್'ಗಳ ಗುರಿ ಬೆನ್ನತ್ತಿದ ಹೈದರಾಬಾದ್ ತಂಡ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡರೂ ವಾರ್ನರ್ ಮತ್ತು ವಿಜಯ್ ಶಂಕರ್ ಭರ್ಜರಿ ಜತೆಯಾಟದ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು.

ಆದರೆ ವಿಷಯ ಏನಪ್ಪಾ ಅಂದ್ರೆ ಅಂಕಿತ್ ಸೋನಿ ಎಸೆದ 10ನೇ ಓವರ್'ನಲ್ಲಿ ಡೇವಿಡ್ ವಾರ್ನರ್ ಬ್ಯಾಟ್ ಸವರಿದ ಚೆಂಡು ಸುರಕ್ಷಿತವಾಗಿ ದಿನೇಶ್ ಕಾರ್ತಿಕ್ ಕೈ ಸೇರಿತು. ಆದರೆ ಅಂಪೈರ್ ಅನಿಲ್ ಚೌಧರಿ ನಾಟೌಟ್ ಎಂದು ತೀರ್ಪಿತ್ತರು. ವಾರ್ನರ್'ಗೆ ತಾವು ಔಟ್ ಎಂದು ಗೊತ್ತಿದ್ದರೂ ಕ್ರೀಡಾಸ್ಪೂರ್ತಿಯಿಂದ ಪೆವಿಲಿಯನ್'ನತ್ತ ಹೆಜ್ಜೆಹಾಕುವ ಬದಲು ಬ್ಯಾಟಿಂಗ್ ಮುಂದುವರೆಸಿದ್ದು ಸಾಕಷ್ಟು ಟೀಕೆಗೆ ಗುರಿಯಾಗಿದೆ...

ಅಷ್ಟಕ್ಕೂ ಏನಾಯ್ತು ನೀವೊಮ್ಮೆ ನೋಡಿಬಿಡಿ...

Scroll to load tweet…