Asianet Suvarna News Asianet Suvarna News

Mini Olympics: ಅಥ್ಲೆಟಿಕ್ಸ್‌ನಲ್ಲಿ ಮೋನಿಶ್, ಸ್ವರಾಗೆ ಚಿನ್ನ

* ಮಿನಿ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಬೆಂಗಳೂರಿನ ಮೋನಿಶ್‌ ಚಂದ್ರಶೇಕರ್‌ ಹಾಗೂ ಸ್ವರಾ ಸಂತೋಷ್‌ 

*  ಈಜು ಸ್ಪರ್ಧೆಯಲ್ಲಿ ಎಲ್ಲಾ ಪದಕಗಳು ಬೆಂಗಳೂರು ಮಕ್ಕಳ ಪಾಲು

* 2ನೇ ಆವೃತ್ತಿ ಕರ್ನಾಟಕ ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಬೆಂಗಳೂರು ಆತಿಥ್ಯ

Monish and Swara clinch Gold medal in athletics  Mini Olympics kvn
Author
Bengaluru, First Published May 20, 2022, 7:41 AM IST

ಬೆಂಗಳೂರು(ಮೇ.20): 2ನೇ ಆವೃತ್ತಿ ಕರ್ನಾಟಕ ಮಿನಿ ಒಲಿಂಪಿಕ್ಸ್‌ನಲ್ಲಿ (Karnataka Mini Olympics) ಬೆಂಗಳೂರಿನ ಮೋನಿಶ್‌ ಚಂದ್ರಶೇಕರ್‌ ಹಾಗೂ ಬೆಳಗಾವಿಯ ಸ್ವರಾ ಸಂತೋಷ್‌ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದ 100 ಮೀ. ಓಟದ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿದ್ದಾರೆ.ಮೋನಿಶ್‌ 11.4 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಪಡೆದರೆ, ಉ.ಕನ್ನಡದ ಸಾಯಿನಾಥ್‌, ಶಿವಮೊಗ್ಗದ ಹಿಮೇಶ್‌ ಕ್ರಮವಾಗಿ ಬೆಳ್ಳಿ, ಕಂಚು ಗೆದ್ದರು. ಬಾಲಕಿಯರ ವಿಭಾಗದಲ್ಲಿ ಸ್ವರಾ 12.0 ಸೆಕೆಂಡ್‌ಗಳಲ್ಲಿ ಕ್ರಮಿಸಿದರೆ, ಮೈಸೂರಿನ ಅಪೇಕ್ಷಾ ಹಾಗೂ ಕೊಡಗಿನ ಗಗನಾ ಕ್ರಮವಾಗಿ ಬೆಳ್ಳಿ ಮತ್ತು ಕಂಚು ತಮ್ಮದಾಗಿಸಿಕೊಂಡರು. 

ಬಾಲಕರ ಹೈಜಂಪ್‌ನಲ್ಲಿ ಬೆಂಗಳೂರಿನ ಅನ್ಶುಲ್‌, ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ಹರ್ಷಿತಾ, ಬಾಲಕರ ಶಾಟ್‌ಪುಟ್‌ನಲ್ಲಿ ಉಡುಪಿಯ ಅನುರಾಗ್‌, ಬಾಲಕಿಯ ವಿಭಾಗದಲ್ಲಿ ಬೆಂಗಳೂರಿನ ಅದ್ವಿಕಾ ಚಿನ್ನ ಪಡೆದರು. ಬಾಲಕರ ಡಬಲ್ಸ್‌ ಟೇಬಲ್‌ ಟೆನಿಸ್‌ನಲ್ಲಿ ಬೆಂಗಳೂರಿನ ದಿನೇಶ್‌-ಸಿದ್ಧಾಂತ್‌, ಬಾಲಕಿಯರ ವಿಭಾಗದಲ್ಲಿ ಬೆಳಗಾವಿಯ ಆಯುಷಿ-ಸಾನ್ವಿ ಸ್ವರ್ಣ ಜಯಿಸಿದರು. ಈಜು ಸ್ಪರ್ಧೆಯ ಬಾಲಕರ 800 ಮೀ. ಫ್ರೀಸ್ಟೈಲ್‌, ಬಾಲಕಿಯರ 200 ಮೀ. ಫ್ರೀಸ್ಟೈಲ್‌ ಹಾಗೂ 800 ಮೀ. ಫ್ರೀಸ್ಟೈಲ್‌ನಲ್ಲಿ ಎಲ್ಲಾ ಪದಕಗಳು ಬೆಂಗಳೂರಿನ ಮಕ್ಕಳ ಪಾಲಾದವು.

ಆರ್ಚರಿ ವಿಶ್ವಕಪ್‌: ಕಂಚು ಗೆದ್ದ ಭಾರತ

ಗ್ವಾಂಗ್‌ಜು(ದ.ಆಫ್ರಿಕಾ): ಭಾರತ ಮಹಿಳಾ ತಂಡ ಆರ್ಚರಿ ವಿಶ್ವಕಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದು, ಪದಕ ಗಳಿಕೆಯನ್ನು 3ರಲ್ಲಿ ಹೆಚ್ಚಿಸಿದೆ. ಗುರುವಾರ ರಿಧಿ ಫೆರ್‌, ಕೊಮಾಲಿಕಾ ಬಾರಿ ಮತ್ತು ಅಂಕಿತಾ ಅವರನ್ನೊಳಗೊಂಡ ರೀಕರ್ವ್‌ ತಂಡ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಚೈನೀಸ್‌ ತೈಪೆಯನ್ನು 6-2ರಲ್ಲಿ ಸೋಲಿಸಿತು. ಅದರೆ ಪುರುಷರ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲನುಭವಿಸಿತು. ಬುಧವಾರ ಕಾಂಪೌಂಡ್‌ ಮಹಿಳಾ ತಂಡ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದು, ಪುರುಷರ ತಂಡ ಫೈನಲ್‌ ಪ್ರವೇಶಿಸಿ ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿಕೊಂಡಿದೆ.

ಥಾಯ್ಲೆಂಡ್‌ ಓಪನ್‌: ಸಿಂಧು ಕ್ವಾರ್ಟರ್‌ಗೆ

ಬ್ಯಾಂಕಾಕ್‌: ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಪಿ.ವಿ.ಸಿಂಧು ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಕೂಟದಲ್ಲಿ ಉಳಿದುಕೊಂಡ ಏಕೈಕ ಭಾರತೀಯ ಶಟ್ಲರ್‌ ಎನಿಸಿಕೊಂಡಿದ್ದಾರೆ. ಗುರುವಾರ ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ ಕೊರಿಯಾದ ಸಿಮ್‌ ಯು ಜಿನ್‌ ವಿರುದ್ಧ ವಿಶ್ವ ನಂ.7 ಸಿಂಧು 21-16, 21-13 ನೇರ ಗೇಮ್‌ಗಳಲ್ಲಿ ಜಯಗಳಿಸಿದರು. 

World Boxing Championships ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನಿಖಾತ್‌ಗೆ ಚಿನ್ನ!

ಅಂತಿಮ 8ರ ಸುತ್ತಿನಲ್ಲಿ ಅವರು ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಸೆಣಸಾಡಲಿದ್ದಾರೆ. ಇನ್ನು, ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ವಿಯೆಟ್ನಾಂನ ನಾಟ್‌ ನುಯೆನ್‌ ವಿರುದ್ಧ ಅಡಬೇಕಿದ್ದ ಕಿದಂಬಿ ಶ್ರೀಕಾಂತ್‌ ಎದುರಾಳಿಗೆ ‘ವಾಕ್‌ ಓವರ್‌’ ನೀಡಿ ಕೂಟದಿಂದ ನಿರ್ಗಮಿಸಿದರು. ಆದರೆ ಕಾರಣ ತಿಳಿದುಬಂದಿಲ್ಲ.

Follow Us:
Download App:
  • android
  • ios