ಇದುವರೆಗೂ ಚುಟುಕು ಕ್ರಿಕೆಟ್'ನಲ್ಲಿ ಕ್ರಿಸ್ ಗೇಲ್ 2013 ರಲ್ಲಿ ಬೆಂಗಳೂರಿನಲ್ಲಿ ಆರ್'ಸಿಬಿ ಪರ 66 ಎಸತಗಳಲ್ಲಿ 175 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ನವದೆಹಲಿ(ಫೆ.07): ಚುಟುಕು ಕ್ರಿಕೆಟ್' ಟಿ20ಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಕ್ರಿಸ್ ಗೇಲ್'ನನ್ನು ಮೀರಿಸಿದ ಸಾಧನೆಯನ್ನು ಬ್ಯಾಟ್ಸ್'ಮೆನ್ ಕಮ್ ವಿಕೆಟ್ ಕೀಪರ್ ನಿರ್ಮಿಸಿದ್ದಾನೆ.

21 ವರ್ಷದ ಮೋಹಿತ್ ಅಹ್ಲವತ್ ಇಂತಹದೊಂದು ಸಾಧನೆ ಮಾಡಿದ ಯುವಕ. ನವದೆಹಲಿಯ ಲಲಿತ್ ಪಾರ್ಕ್'ನಲ್ಲಿ ಮಾವಿ XI ತಂಡವನ್ನು ಪ್ರತಿನಿಧಿಸುವ ಈ ಆಟಗಾರ ಫ್ರೆಂಡ್ಸ್ XI ತಂಡದ ಪರ 72 ಎಸೆತಗಳಲ್ಲಿ 300 ರನ್ ಗಳಿಸಿದ್ದಾನೆ. ಈ 300 ರನ್'ಗಳಲ್ಲಿ 39 ಭರ್ಜರಿ ಸಿಕ್ಸರ್ ಹಾಗೂ 14 ಬೌಂಡರಿಗಳಿದ್ದವು.

ಇದುವರೆಗೂ ಚುಟುಕು ಕ್ರಿಕೆಟ್'ನಲ್ಲಿ ಕ್ರಿಸ್ ಗೇಲ್ 2013 ರಲ್ಲಿ ಬೆಂಗಳೂರಿನಲ್ಲಿ ಆರ್'ಸಿಬಿ ಪರ 66 ಎಸತಗಳಲ್ಲಿ 175 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಈ ದಾಖಲೆಯನ್ನು ಮೋಹಿತ್ ನುಚ್ಚುನೂರು ಮಾಡಿದ್ದಾರೆ. ಮಾವಿ XI ತಂಡ 20 ಓವರ್ ಗಳಲ್ಲಿ 416 ರನ್ ಕಲೆ ಹಾಕಿತ್ತು.