ಮತ್ತೆ ಸಂಕಷ್ಟದಲ್ಲಿ ಶಮಿ; ಬಿಸಿಸಿಐನಿಂದ ವೇಗಿಗೆ ಶಾಕ್..!

First Published 15, Mar 2018, 3:34 PM IST
Mohammed Shami to be Investigated by Anti corruption Unit After BCCI CoA Seeks Help
Highlights

ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್, ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ನೀರಜ್ ಕುಮಾರ್‌'ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ನವದೆಹಲಿ(ಮಾ.15): ಪತ್ನಿಯಿಂದಲೇ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿರುವ ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮದ್ ಶಮಿ ವಿರುದ್ಧ ಬಿಸಿಸಿಐ ತನಿಖೆ ನಡೆಸಲು ನಿರ್ಧರಿಸಿದೆ.

ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್, ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ನೀರಜ್ ಕುಮಾರ್‌'ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಒಂದು ವಾರದೊಳಗೆ ವರದಿ ನೀಡುವಂತೆ ತಿಳಿಸಲಾಗಿದೆ. ಫಿಕ್ಸಿಂಗ್ ಸಂಬಂಧ ಶಮಿ ಜತೆ ಪತ್ನಿ ಹಸೀನ್ ನಡೆಸಿರುವ ದೂರವಾಣಿ ಸಂಭಾಷಣೆಯನ್ನು ಆಲಿಸಿರುವ ರಾಯ್, ತನಿಖೆ ನಡೆಸಲು ನಿರ್ಧರಿಸಿದರು ಎನ್ನಲಾಗಿದೆ. ಮೂರು ವಿಚಾರಗಳ ಕುರಿತು ತನಿಖೆ ನಡೆಸುವಂತೆ ತಿಳಿಸಲಾಗಿದೆ.

1. ದೂರವಾಣಿ ಸಂಭಾಷನೆ ವೇಳೆ ಕೇಳಿಬರುವ ಮೊಹಮದ್ ಭಾಯ್ ಹಾಗೂ ಅಲಿಶ್ಬಾ ಎನ್ನುವವರು ಯಾರು?

2. ಈ ವ್ಯಕ್ತಿಗಳಿಂದ ಶಮಿ ಹಣ ಪಡೆದಿದ್ದಾರಾ?

3. ಹಣ ಪಡೆದಿದ್ದರೆ, ಅದರ ಉದ್ದೇಶವೇನು? ಈ ಮೂರು ವಿಷಯಗಳನ್ನು ಪತ್ತೆ ಮಾಡುವಂತೆ ಭದ್ರತಾ ತಂಡಕ್ಕೆ ಸೂಚಿಸಲಾಗಿದೆ

loader