ಶಮಿ ಕಾರಿಗೆ ಟ್ರಕ್ ಡಿಕ್ಕಿ: ತೀವ್ರ ಗಾಯ, ತಲೆಗೆ 10 ಹೊಲಿಗೆ

First Published 25, Mar 2018, 10:56 AM IST
Mohammed Shami injured in road accident
Highlights

ಐಆರ್‌ಡಿಎ ಅನಗತ್ಯವಾಗಿ ಏಕಪಕ್ಷೀಯವಾಗಿ ಸರಕು ಸಾಗಣೆ ವಾಹನಗಳಿಗೆ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಥರ್ಡ್ ಪಾರ್ಟಿ ವಿಮೆ ಮೊತ್ತ ನಿಗದಿಗೊಳಿಸಿದೆ. ಈ ಪರಿಷ್ಕೃತ ದುಬಾರಿ ಮೊತ್ತ ಈ ಹಿಂದಿನ ವರ್ಷಗಳಿಗಿಂತ ನೂರಾರು ಪಟ್ಟು ಹೆಚ್ಚಳವಾಗಿದ್ದು, ಲಾರಿ ಮಾಲೀಕರಿಗೆ ಮಾರಕವಾಗಿದೆ

ನವದೆಹಲಿ(ಮಾ.25): ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮದ್ ಶಮಿ ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಕಾರಣ ತೀವ್ರವಾಗಿ ಗಾಯಗೊಂಡಿದ್ದಾರೆ.

ಡೆಹ್ರಾಡೂನ್'ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಟ್ರಕ್ ಡಿಕ್ಕಿ ಹೊಡೆದಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ತೀವ್ರ ಪೆಟ್ಟಾಗಿದ್ದು 10 ಹೊಲಿಗೆ ಹಾಕಲಾಗಿದೆ. ಶಮಿ ವಿರುದ್ಧ ಕೆಲ ದಿನಗಳ ಹಿಂದೆ ಪತ್ನಿ ಹಸೀನಾ ಜಹಾನ್ ಕಿರುಕುಳ, ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದರು.

ಕೋಲ್ಕತ್ತಾ ಪೊಲೀಸರು ಈಗಾಗಲೆ ತನಿಖೆ ಕೈಗೊಂಡಿದ್ದು ಬಿಸಿಸಿಐ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಬಿಸಿಸಿಐನ ಭ್ರಷ್ಟಾಚಾರ ತನಿಖಾ ಘಟಕ ಕ್ಲೀನ್ ಚಿಟ್ ನೀಡಿತ್ತು. ಶಮಿ ಐಪಿಎಲ್'ನಲ್ಲಿ ಡೇರ್'ಡೇವಿಲ್ ಪರ ಆಡಲಿದ್ದಾರೆ.

loader