ಕೋಲ್ಕತಾ(ನ.22): ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಆಯ್ಕೆಯಾಗಿ ರುವ ಭಾರತ ತಂಡದ ವೇಗಿ ಮೊಹಮದ್ ಶಮಿ, ಬಿಸಿಸಿಐ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.
ರಣಜಿಯಲ್ಲಿ ಪ.ಬಂಗಾಳ ತಂಡದ ಪರ ಆಡುತ್ತಿರುವ ಶಮಿ, 26 ಓವರ್ ಬೌಲಿಂಗ್ ಮಾಡಿದ್ದಾರೆ. 

ಶಮಿಗೆ ರಣಜಿಯಲ್ಲಿ ಆಡಲು ಅನುಮತಿ ನೀಡಿದ್ದ ಬಿಸಿಸಿಐ, ಆಸ್ಟ್ರೇಲಿಯಾ ಪ್ರವಾಸವನ್ನು ಗಮನದಲ್ಲಿರಿಸಿಕೊಂಡು ಕೆಲಸದ ಒತ್ತಡ ಹೆಚ್ಚದಂತೆ 15 ರಿಂದ 17 ಓವರ್ ಮಾತ್ರ ಬೌಲಿಂಗ್ ಮಾಡಲು ಅವಕಾಶ ನೀಡಿತ್ತು. ಆದರೆ ಬಿಸಿಸಿಐನ ಮಾತಿಗೆ ಕ್ಯಾರೆ ಎನ್ನದ ಶಮಿ, ಪಂದ್ಯದಲ್ಲಿ 26 ಓವರ್ ಬೌಲಿಂಗ್ ಮಾಡಿದ್ದಾರೆ.
 
‘ತವರಿನ ಪರ ಪಂದ್ಯವನ್ನಾಡುತ್ತಿರುವ ವೇಳೆ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸುವುದು ಕರ್ತವ್ಯ’ ಎಂದು ಶಮಿ ಹೇಳಿದ್ದಾರೆ. ಹೀಗಾಗಿ ನಿರ್ದಿಷ್ಟ ಓವರ್ ಹಾಕಿ ಸುಮ್ಮನಾಗುವುದು ಸೂಕ್ತವಲ್ಲ ಎಂದಿದ್ದಾರೆ.