ಶಮಿಗೆ ಬಿಸಿಸಿಐ'ನಿಂದ ಕ್ಲೀನ್ ಚಿಟ್, ಬಿ ಗುತ್ತಿಗೆ ಫಿಕ್ಸ್: ಹೆಂಡತಿ ಮಾಡಿದ ಆರೋಪ ಸುಳ್ಳೆ ?

Mohammed Shami given clean chit in BCCIs match fixing probe gets Grade B contract
Highlights

ವಾರ್ಷಿಕ ಗುತ್ತಿಗೆಯಲ್ಲಿ ಗ್ರೇಡ್ ಬಿ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ' ಎಂದು ಬಿಸಿಸಿಐನ ಎಸಿಬಿ ಘಟಕದ ಮುಖ್ಯಸ್ಥ ನೀರಜ್ ಕುಮಾರ್ ತಿಳಿಸಿದ್ದಾರೆ.

ಮುಂಬೈ(ಮಾ.22): ವೇಗದ ಬೌಲರ್ ಮೊಹಮದ್ ಶಮಿಗೆ ಹೆಂಡತಿ ಹಸೀನ್ ಜಹಾನ್ ಮಾಡಿದ್ದ ಮ್ಯಾಚ್ ಫಿಕ್ಸಿಂಗ್  ಆರೋಪಕ್ಕೆ ಬಿಸಿಸಿಐ ಕ್ಲೀನ್ ಚಿಟ್ ನೀಡಿದೆ.

ಪಾಕಿಸ್ತಾನಿ ಮಹಿಳೆಯೊಬ್ಬಳಿಂದ ದುಬೈ'ನಲ್ಲಿ ಹಣ ಸ್ವೀಕರಿಸಲಾಗಿತ್ತು ಎಂಬ ಆರೋಪದಲ್ಲಿ ಯಾವುದೇ ಆಧಾರವಿಲ್ಲದ ಕಾರಣ ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಘಟಕ ಕ್ಕೀನ್ ಚಿಟ್ ನೀಡಿದ್ದು, ವಾರ್ಷಿಕ ಗುತ್ತಿಗೆಯಲ್ಲಿ ಗ್ರೇಡ್ ಬಿ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ' ಎಂದು ಬಿಸಿಸಿಐನ ಎಸಿಬಿ ಘಟಕದ ಮುಖ್ಯಸ್ಥ ನೀರಜ್ ಕುಮಾರ್ ತಿಳಿಸಿದ್ದಾರೆ.

ಶಮಿ ಪತ್ನಿ ಹಸೀನಾ ತಮಗೆ ವರದಕ್ಷಿಣೆ ಕಿರುಕುಳ, ಕೊಲೆ ಯತ್ನ ಸೇರಿದಂತೆ ಹಲವು ಆರೋಪಗಳನ್ನು ಹೊರೆಸಿದ್ದು ಕೋಲ್ಕತ್ತಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಮಿ ಪತ್ನಿಯ ಎಲ್ಲ ಆರೋಪಗಳನ್ನು ನಿರಾಕರಿಸಿ ಆಕೆಗೆ ತಲೆ ಕೆಟ್ಟಿದೆ ಎಂದು ಹೇಳಿಕೆ ನೀಡಿದ್ದರು.

loader