ಮುಂಬೈ(ಜು.25): ಶ್ರೀಲಂಕಾ ವೇಗಿ ನುವಾನ್ ಕುಲಸೇಕರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ ಕುಲಸೇಕರ ವಿದಾಯದ ವೇಳೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಟ್ರೋಲ್ ಆಗಿದ್ದಾರೆ. 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕುಲಸೇಕರ ಎಸೆತದಲ್ಲಿ ಧೋನಿ ಸಿಕ್ಸರ್ ಸಿಡಿಸಿ ಭಾರತಕ್ಕೆ ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಕುಲಸೇಕರ ವಿದಾಯ ಹೇಳಿದಾಗ ಕೈಫ್, ಇದೇ ವಿಚಾರ ಮತ್ತೆ ನನೆಪಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

 

ಇದನ್ನೂ ಓದಿ: ಕೊನೆಗೂ ಕತ್ರಿನಾ ಕೈಫ್ ಭೇಟಿಯಾದ ಮೊಹಮ್ಮದ್ ಕೈಫ್!

ಶ್ರೀಲಂಕಾ ತಂಡಕ್ಕೆ ಅದ್ಭುತ ಕೊಡುಗೆ ನೀಡಿದ ಕ್ರಿಕೆಟಿಗನ ವಿದಾಯವನ್ನು ಸಂಭ್ರಮಿಸುವುದು ಸರಿಯಲ್ಲ. ಕ್ರಿಕೆಟಿಗನಿಗೆ ವಿದಾಯದ ಗೌರವ ನೀಡುವುದನ್ನು ಅರಿಯಬೇಕು ಎಂದು ಅಭಿಮಾನಿಗಳು ಕಿವಿ ಮಾತು ಹೇಳಿದ್ದಾರೆ.