19 ವರ್ಷ ವಯಸ್ಸಿನೊಳಗಿನವರ ತಂಡದ ನಾಯಕರಾಗಿದ್ದನಿಂದಲೂ ಮೊಹಮ್ಮದ್ ಕೈಫ್ ಮತ್ತು ಯುವರಾಜ್ ಸಿಂಗ್ ಉತ್ತಮ ಸ್ನೇಹಿತರಾಗಿದ್ದು, ಕೈಫ್ ಯುವಿ ಬಳಿ ಒಂದು ಕುತೂಹಲಕಾರಿಯಾದ ಗಣಿತದ ಲೆಕ್ಕವನ್ನು ಪರಿಹರಿಸುವಂತೆ ಯುವಿಯನ್ನು ಕೇಳಿಕೊಂಡಿದ್ದಾರೆ.
ನವದೆಹಲಿ(ಮೇ.28): ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತನ್ನ ಸಹಪಾಠಿ ಯುವರಾಜ್ ಸಿಂಗ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಹಾಯ ಯಾಚಿಸಿದ್ದು ಇದೀಗ ವೈರಲ್ ಆಗುತ್ತಿದೆ
19 ವರ್ಷ ವಯಸ್ಸಿನೊಳಗಿನವರ ತಂಡದ ನಾಯಕರಾಗಿದ್ದನಿಂದಲೂ ಮೊಹಮ್ಮದ್ ಕೈಫ್ ಮತ್ತು ಯುವರಾಜ್ ಸಿಂಗ್ ಉತ್ತಮ ಸ್ನೇಹಿತರಾಗಿದ್ದು, ಕೈಫ್ ಯುವಿ ಬಳಿ ಒಂದು ಕುತೂಹಲಕಾರಿಯಾದ ಗಣಿತದ ಲೆಕ್ಕವನ್ನು ಪರಿಹರಿಸುವಂತೆ ಯುವಿಯನ್ನು ಕೇಳಿಕೊಂಡಿದ್ದಾರೆ.
ಅರೆ ಅಷ್ಟಕ್ಕೂ ಆ ಪ್ರಶ್ನೆಯೇನು ಅಂತಿರಾ... ಇಲ್ಲಿದೆ ನೋಡಿ ಆ ಪ್ರಶ್ನೆ...
"ಯುವರಾಜ್ ಸಿಂಗ್ ಚೆಂಡನ್ನು ಬಾರಿಸಿ ನಾನ್'ಸ್ಟ್ರೈಕ್ ತಲುಪಲು 3.2 ಸೆಕೆಂಡ್ ತೆಗೆದುಕೊಂಡರೆ, ಅದೇವೇಳೆ ನಾನ್'ಸ್ಟ್ರೈಕ್ ತುದಿಯಲ್ಲಿರುವ ಕೈಫ್ ಸ್ಟ್ರೈಕ್ ತಲುಪಲು ಕೇವಲ 1.8 ಸೆಕೆಂಡ್ ತೆಗೆದುಕೊಳ್ಳುತ್ತಾರೆ. ಹಾಗಾದರೆ ಇವರಿಬ್ಬರ ತೆಗೆದುಕೊಂಡ ಸಮಯದ ವೇಗದ ಅನುಪಾತ ಕಂಡು ಹಿಡಿಯಿರಿ".
ಕೈಫ್ ಯುವಿಗೆ ಟ್ವೀಟ್ ಮಾಡಿದ್ದು ಹೀಗೆ...