ನೆಟ್ಟಿಗರು ಕೈಫ್ ಕಾಲೆಳೆಯುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಚೆಸ್ ಆಡುವಾಗ, ಸೂರ್ಯ ನಮಸ್ಕಾರ ಮಾಡುವಾಗ, ತ್ರಿವಳಿ ತಲಾಖ್ ಬೆಂಬಲಿಸಿದಾಗಲೂ ಸಾಕಷ್ಟು ಟೀಕೆ ಎದುರಿಸಿದ್ದರು.
ನವದೆಹಲಿ(ಡಿ.27): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟರಿಗರ ಟ್ರೋಲ್'ಗೆ ಒಳಗಾಗಿದ್ದಾರೆ.
ಹೌದು, ಕ್ರಿಸ್'ಮಸ್ ಹಬ್ಬಕ್ಕೆ ಶುಭಕೋರಿದ ಕೈಫ್'ರನ್ನು ಅವರ ಹಿಂಬಾಲಕರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಒಬ್ಬಾತ ಮುಸ್ಲೀಂ ಆದ ನಿಮಗೆ ನಾಚಿಕೆ ಆಗುವುದಿಲ್ಲವಾ ಎಂದರೆ, ಮತ್ತೊಬ್ಬ ಜಾತ್ಯಾತೀತ ರಾಷ್ಟ್ರ, ಜಾತ್ಯಾತೀತ ಜನರು. ಮೊದಲು ನಿಮ್ಮ ಧರ್ಮದ ಬಗ್ಗೆ ಯೋಚಿಸಿ, ಆ ಬಳಿಕ ಇಂತಹ ಚಟುವಟಿಕೆ ಮಾಡಿ ಎಂದು ಕಾಲೆಳೆದಿದ್ದಾರೆ.
ನೆಟ್ಟಿಗರು ಕೈಫ್ ಕಾಲೆಳೆಯುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಚೆಸ್ ಆಡುವಾಗ, ಸೂರ್ಯ ನಮಸ್ಕಾರ ಮಾಡುವಾಗ, ತ್ರಿವಳಿ ತಲಾಖ್ ಬೆಂಬಲಿಸಿದಾಗಲೂ ಸಾಕಷ್ಟು ಟೀಕೆ ಎದುರಿಸಿದ್ದರು.