ನಿನ್ನೆಯಷ್ಟೇ ಮೊಹಮದ್ ಇರ್ಫಾನ್ ಪಿಸಿಎಲ್ ವೇಳೆ ಬುಕ್ಕಿಗಳ ಜತೆ ಸಂಪರ್ಕದಲ್ಲಿದ್ದ ಸ್ಫೋಟಕ ಸತ್ಯವನ್ನು ಬಹಿರಂಗಗೊಳಿಸಿ, ವಿಷಯವನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ತಿಳಿಸಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದರು.
ಕರಾಚಿ(ಮಾ.14): ಪಾಕಿಸ್ತಾನ ಸೂಪರ್ ಲೀಗ್ ಟಿ20 ಟೂರ್ನಿಯ ವೇಳೆ ಕಳ್ಳಾಟದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ವೇಗಿ ಮೊಹಮದ್ ಇರ್ಫಾನ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ತಾತ್ಕಾಲಿಕವಾಗಿ ನಿಷೇಧಗೊಳಿಸಿದೆ.
ಇರ್ಫಾನ್ ಜತೆ ಕ್ವೆಟ್ಟಾ ಗ್ಲೇಡಿಯೇಟರ್ಸ್ ತಂಡದ ಝುಲಿಕರ್ ಬಾಬರ್ ಹಾಗೂ ಕರಾಚಿ ಕಿಂಗ್ಸ್'ನ ಆರಂಭಿಕ ಬ್ಯಾಟ್ಸ್‌ಮನ್ ಶಝೈಬ್ ಹಸನ್ ಅವರನ್ನೂ ವಿಚಾರಣೆಗೆ ಒಳಪಡಿಸಿದೆ. ನಿಷೇಧದ ವಿಷಯವನ್ನು ಧೃಡೀಕರಿಸಿರುವ ಪಿಸಿಬಿ ತನ್ನ ಪ್ರಕಟಣೆಯಲ್ಲಿ ಇರ್ಫಾನ್'ಗೆ ಉತ್ತರಿಸಲು 14 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದೆ.
ನಿನ್ನೆಯಷ್ಟೇ ಮೊಹಮದ್ ಇರ್ಫಾನ್ ಪಿಸಿಎಲ್ ವೇಳೆ ಬುಕ್ಕಿಗಳ ಜತೆ ಸಂಪರ್ಕದಲ್ಲಿದ್ದ ಸ್ಫೋಟಕ ಸತ್ಯವನ್ನು ಬಹಿರಂಗಗೊಳಿಸಿ, ವಿಷಯವನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ತಿಳಿಸಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದರು.