‘ಬೆಂಗಳೂರಿಗೂ ನನಗೂ ಅವಿನಾಭಾವ ಸಂಬಂಧವಿದೆ. ಇಂಗ್ಲೆಂಡ್‌ನಲ್ಲಿ ನಡೆದ ಮಹಿಳಾ ವಿಶ್ವಕಪ್‌ಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಒಂದು ವಾರ ಅಭ್ಯಾಸ ನಡೆಸಿದ್ದೆ.

ಬೆಂಗಳೂರು(ಆ.20): ನಮ್ಮ ಮುಂದಿನ ಗುರಿ ಟಿ20 ವಿಶ್ವಕಪ್, ಅದಕ್ಕೆ ಅಗತ್ಯವಾದ ಯೋಜನೆ ರೂಪಿಸಲಾಗುತ್ತಿದೆ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ತಿಳಿಸಿದರು. ಕ್ರಿಕೆಟ್ ಅಕಾಡೆಮಿಯೊಂದರ ಉದ್ಘಾಟನೆಗೆ ನಗರಕ್ಕೆ ಆಗಮಿಸಿದ್ದ ಮಿಥಾಲಿ, ‘ಮುಂದಿನ ತಿಂಗಳಿಂದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸುವ ಮೂಲಕ ಟಿ೨೦ ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಲಿದ್ದೇವೆ. ಕೆಲ ಆಟಗಾರ್ತಿಯರು ಈಗಾಗಲೇ ದೇಸಿ ಟೂರ್ನಿಗಳಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದರು.

‘ಬೆಂಗಳೂರಿಗೂ ನನಗೂ ಅವಿನಾಭಾವ ಸಂಬಂಧವಿದೆ. ಇಂಗ್ಲೆಂಡ್‌ನಲ್ಲಿ ನಡೆದ ಮಹಿಳಾ ವಿಶ್ವಕಪ್‌ಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಒಂದು ವಾರ ಅಭ್ಯಾಸ ನಡೆಸಿದ್ದೆ. ಇದೇ ಸಂದರ್ಭದಲ್ಲಿ ವೇದಾ ಕೃಷ್ಣಮೂರ್ತಿ ಅವರ ಬಗ್ಗೆ ಸಿಕ್ರೇಟ್ ಬಿಚ್ಚಿಟ್ಟ ಅವರು, ವೇದಾ ನನ್ನ ನೆಚ್ಚಿನ ಗೆಳತಿ’ ಎಂದು ಹೇಳಿದರು.