ಇಲ್ಲಿನ ಕೌಂಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮಿಥಲಿ ರಾಜ್ ಪಡೆ ಆರಂಭಿಕ ಆಟಗಾರ್ತಿಯರಾದ ಪೂನಮ್ ರಾವತ್ (86: 134 ಎಸೆತ, 7 ಬೌಂಡರಿ, 1 ಸಿಕ್ಸರ್), ಸ್ಮತಿ ಮಂದನಾ (90: 72 ಎಸೆತ, 11 ಬೌಂಡರಿ, 2 ಸಿಕ್ಸರ್)  ಮಿಥಾಲಿ ರಾಜ್ (71:73 ಎಸತ, 8 ಬೌಂಡರಿ) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 281 ರನ್‌ಗಳಿಸಿತು.

ಡರ್ಬಿ(ಜೂ.24): ಭಾರತ ಮಹಿಳಾ ತಂಡ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 35 ರನ್'ಗಳ ಜಯಗಳಿಸಿ ಶುಭಾರಂಭ ಮಾಡಿದೆ.

ಇಲ್ಲಿನ ಕೌಂಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮಿಥಲಿ ರಾಜ್ ಪಡೆ ಆರಂಭಿಕ ಆಟಗಾರ್ತಿಯರಾದ ಪೂನಮ್ ರಾವತ್ (86: 134 ಎಸೆತ, 7 ಬೌಂಡರಿ, 1 ಸಿಕ್ಸರ್), ಸ್ಮತಿ ಮಂದನಾ (90: 72 ಎಸೆತ, 11 ಬೌಂಡರಿ, 2 ಸಿಕ್ಸರ್) ಮಿಥಾಲಿ ರಾಜ್ (71:73 ಎಸತ, 8 ಬೌಂಡರಿ) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 281 ರನ್‌ಗಳಿಸಿತು.

ಈ ಉತ್ತಮ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಆಟಗಾರ್ತಿಯರು 47.3 ಓವರ್‌ಗಳಲ್ಲಿ 246 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾದರು. ಭಾರತದ ಪರ ದೀಪ್ತಿ ಶರ್ಮಾ 3, ಶಿಖಾ ಪಾಂಡೆ 2 ವಿಕೆಟ್ ಪಡೆದರು.

ಸ್ಕೋರ್

ಭಾರತ 50 ಓವರ್‌ಗಳಲ್ಲಿ 281/3

(ಮಂದನಾ 90, ರಾವತ್ 86, ಹೆದರ್ ನೈಟ್ 41ಕ್ಕೆ 2)

ಇಂಗ್ಲೆಂಡ್ 47.3 ಓವರ್‌ಗಳಲ್ಲಿ 246/10

(ವಿಲ್ಸನ್ 81, ಹೆದರ್ ನೈಟ್ 46, ದೀಪ್ತಿ ಶರ್ಮಾ 47ಕ್ಕೆ 3)