ಮಿಥಾಲಿ ರಾಜ್ ಪಾತ್ರವನ್ನು ಈ ಸ್ಟಾರ್ ನಟಿ ಮಾಡಬೇಕಂತೆ..!

Mithali Raj Priyanka Chopra will be a great choice for my biopic
Highlights

ಕಳೆದ ವರ್ಷ ವಿಯಾಕಾಮ್‌ 18 ಸಂಸ್ಥೆ ಮಿಥಾಲಿ ಜೀವನವನ್ನು ಸಿನಿಮಾ ಮಾಡುವ ಪ್ರಸ್ತಾಪವಿರಿಸಿತ್ತು. ಅದಕ್ಕೆ ಅವರು ಹಸಿರು ನಿಶಾನೆ ತೋರಿದ್ದರು.

ನವದೆಹಲಿ[ಜು.10]: ತಮ್ಮ ಜೀವನಾಧಾರಿತ ಸಿನಿಮಾದಲ್ಲಿ ಅಂತಾರಾಷ್ಟ್ರೀಯ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ನಟಿಸಬೇಕು ಎಂದು ಭಾರತ ಮಹಿಳಾ ಏಕದಿನ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಹೇಳಿದ್ದಾರೆ. 

ಕಳೆದ ವರ್ಷ ವಿಯಾಕಾಮ್‌ 18 ಸಂಸ್ಥೆ ಮಿಥಾಲಿ ಜೀವನವನ್ನು ಸಿನಿಮಾ ಮಾಡುವ ಪ್ರಸ್ತಾಪವಿರಿಸಿತ್ತು. ಅದಕ್ಕೆ ಅವರು ಹಸಿರು ನಿಶಾನೆ ತೋರಿದ್ದರು. ಮಿಥಾಲಿ ಪಾತ್ರಕ್ಕಾಗಿ ಹುಡುಕಾಟ ಆರಂಭವಾಗಿದ್ದು, ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಭಾರತದ ನಾಯಕಿ, ‘ನನ್ನ ಪಾತ್ರದಲ್ಲಿ ಪ್ರಿಯಾಂಕ ಅಭಿನಯಿಸಿದರೆ ಒಳ್ಳೇದು. ನಮ್ಮಿಬ್ಬರ ವ್ಯಕ್ತಿತ್ವ ಒಂದೇ ರೀತಿ ಇದೆ’ ಎಂದು ಹೇಳಿದ್ದಾರೆ.

ಕಳೆದ ವರ್ಷ ಭಾರತದ ವನಿತೆಯರ ತಂಡವನ್ನು ವಿಶ್ವಕಪ್ ಫೈನಲ್’ವರೆಗೆ ಮುನ್ನಡೆಸಿದ್ದ ಮಿಥಾಲಿ ರಾಜ್ ಪ್ರಶಸ್ತಿ ಸುತ್ತಿ ಮುಗ್ಗರಿಸಿತ್ತು. 2019ರ ಆರಂಭದಲ್ಲಿ ಮಿಥಾಲಿ ರಾಜ್ ಜೀವಾನಾಧಾರಿತ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ ಎನ್ನಲಾಗುತ್ತಿದೆ.
 

loader