ಮಿಥಾಲಿ ರಾಜ್ ನೇತೃತ್ವದ ವನಿತೆಯರ ಟೀಂ ಇಂಡಿಯಾ ಇಂಗ್ಲೆಂಡ್'ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಸ್ಥಾನಗಳಿಸಿತ್ತು.

ಹೈದರಾಬಾದ್(ಡಿ.30): ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಸಾಧನೆ ಪರಿಗಣಿಸಿ ತೆಲಂಗಾಣ ಸರ್ಕಾರ ₹ 1 ಕೋಟಿ ನಗದು ಮತ್ತು 600 ಚದರ-ಅಡಿ ನಿವೇಶನವನ್ನು ಉಡುಗೊರೆಯಾಗಿ ನೀಡಿದೆ.

ಇತ್ತೀಚೆಗಷ್ಟೇ ತೆಲಂಗಾಣ ರಾಜ್ಯ ಕ್ರೀಡಾ ಸಚಿವ ಟಿ. ಪದ್ಮರಾವ್, ಮಿಥಾಲಿ ಅವರನ್ನು ಸನ್ಮಾನಿಸಿದ್ದರು. ಈ ವೇಳೆ ರಾಜ್ಯ ಸರ್ಕಾರ ಘೋಷಿಸಿದಂತೆ ಉಡುಗೊರೆಯನ್ನು ನೀಡಲಾಗಿದೆ. ಮಿಥಾಲಿ ಅವರ ಕೋಚ್ ಮೂರ್ತಿಗೆ ₹ 25 ಲಕ್ಷ ನೀಡಲಾಗಿದೆ.

ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ನಿರ್ದೇಶನದಂತೆ ಈ ಉಡುಗೊರೆ ನೀಡಲಾಗಿದ್ದು, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪದ್ಮರಾವ್ ಹೇಳಿದ್ದಾರೆ. ಮಿಥಾಲಿ ರಾಜ್ ನೇತೃತ್ವದ ವನಿತೆಯರ ಟೀಂ ಇಂಡಿಯಾ ಇಂಗ್ಲೆಂಡ್'ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಸ್ಥಾನಗಳಿಸಿತ್ತು.