ಮತ್ತೆ ಮುಂಬೈ ಇಂಡಿಯನ್ಸ್ ಕೂಡಿಕೊಂಡ ಸ್ಟಾರ್ ಆಟಗಾರ..!

First Published 20, Mar 2018, 5:30 PM IST
Mitchell McClenaghan to replace Jason Behrendorff in Mumbai Indians squad
Highlights

ಕಳೆದ ಮೂರು ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿರುವ ಕಿವೀಸ್ ವೇಗಿ ಮೆಕ್ಲೆನಾಘನ್‌ 2017ನೇ ಆವೃತ್ತಿಯಲ್ಲಿ 19 ವಿಕೆಟ್ ಪಡೆದು ಮಿಂಚಿದ್ದರು.

ನವದೆಹಲಿ(ಮಾ.20): ಐಪಿಎಲ್ 11ನೇ ಆವೃತ್ತಿಯಲ್ಲಿ ಗಾಯಾಳು ಜೇಸನ್ ಬೆಹ್ರೆನ್‌'ಡಾರ್ಫ್ ಬದಲಿಗೆ ಮಿಚೆಲ್ ಮೆಕ್ಲೆನಾಘನ್‌'ರನ್ನು ಸೇರಿಸಿಕೊಳ್ಳಲು, ಮುಂಬೈ ಇಂಡಿಯನ್ಸ್‌'ಗೆ ಐಪಿಎಲ್ ತಾಂತ್ರಿಕ ಸಮಿತಿ ಅನುಮತಿ ನೀಡಿದೆ.

ಆಸ್ಟ್ರೇಲಿಯಾದ ಬೆಹ್ರೆನ್‌'ಡಾರ್ಫ್, ಬೆನ್ನು ನೋವಿನಿಂದ ಬಳಲುತ್ತಿದ್ದು ಈ ಆವೃತ್ತಿಯ ಐಪಿಎಲ್'ನಿಂದ ಹೊರಬಿದ್ದಿದ್ದಾರೆ. ನಿಯಮದ ಪ್ರಕಾರ, ನೋಂದಣಿ ಮಾಡಿಕೊಂಡ ಹಾಗೂ ಲಭ್ಯವಿರುವ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಮುಂಬೈಗೆ ಅವಕಾಶ ನೀಡಲಾಯಿತು. ಕಳೆದ ಆವೃತ್ತಿಗಳಲ್ಲಿ ಮುಂಬೈ ಪರ ಆಡಿದ್ದ ನ್ಯೂಜಿಲೆಂಡ್ ವೇಗಿ ಮೆಕ್ಲೆನಾಘನ್‌'ರನ್ನು ಅವರ ಮೂಲಬೆಲೆ ₹1 ಕೋಟಿಗೆ ಮುಂಬೈ ಇಂಡಿಯನ್ಸ್ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.

ಕಳೆದ ಮೂರು ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿರುವ ಕಿವೀಸ್ ವೇಗಿ ಮೆಕ್ಲೆನಾಘನ್‌ 2017ನೇ ಆವೃತ್ತಿಯಲ್ಲಿ 19 ವಿಕೆಟ್ ಪಡೆದು ಮಿಂಚಿದ್ದರು.

loader