ಆಸ್ಟ್ರೇಲಿಯಾದ ಸದ್ಯದ ಪೂರ್ಣ ಪ್ರಮಾಣದ ಕೋಚ್ ಆಗಿ ಡರೆನ್ ಲೆಹ್ಮನ್ ಕಾರ್ಯನಿರ್ವಹಿಸುತ್ತಿದ್ದಾರೆ.
ಮೆಲ್ಬೋರ್ನ್(ಡಿ.05): ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕ್ ಹಸ್ಸಿ ಸದ್ಯದಲ್ಲೇ ಆಸ್ಟ್ರೇಲಿಯಾ ಟಿ20 ತಂಡದ ಕೋಚ್ ಆಗಿ ನಿಯುಕ್ತಿಯಾಗುವ ಸಾಧ್ಯತೆಗಳಿವೆ.
ಮುಂಬರಲಿರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ತಂಡದ ಹಂಗಾಮಿ ಕೋಚ್ ಆಗಿ ಮೆಸ್ಸಿ ಕಾರ್ಯನಿರ್ವಹಿಸಲಿರುವುದು ಇದರ ಸುಳಿವು ನೀಡಿದೆ. ನನಗೆ ಕೋಚ್ ಆಗಿ ಕಾರ್ಯ ನಿರ್ವಹಿಸಲು ಆಸಕ್ತಿಯಿದೆ. ಆದರೆ ದೀರ್ಘಾವಧಿಯವರೆಗೆ ಕೋಚ್ ಆಗಿ ಮುಂದುವರೆಯುತ್ತೇನೆ ಎಂದು ಈಗಲೇ ಹೇಳಲಾರೆ ಎಂದು ಎಡಗೈ ಬ್ಯಾಟ್ಸ್'ಮನ್ ಹಸ್ಸಿ ಹೇಳಿದ್ದಾರೆ.
ಅಂದಹಾಗೆ ಆಸ್ಟ್ರೇಲಿಯಾದ ಸದ್ಯದ ಪೂರ್ಣ ಪ್ರಮಾಣದ ಕೋಚ್ ಆಗಿ ಡರೆನ್ ಲೆಹ್ಮನ್ ಕಾರ್ಯನಿರ್ವಹಿಸುತ್ತಿದ್ದಾರೆ.
