ಮುಂಬೈ'ಗೆ ದಾಖಲೆ ಜಯ : ಪಾಂಡ್ಯ ಸಹೋದರರ ದಾಳಿಗೆ ಧೂಳಿಪಟ

MI Won By 102 Runs at IPL
Highlights

ಮುಂಬೈ ನೀಡಿದ್ದ 210 ರನ್'ಗಳ ಸವಾಲಿಗೆ ಉತ್ತರವಾಗಿ ದಿನೆಶ್ ಕಾರ್ತಿಕ್ ನೇತೃತ್ವದ ಪಡೆ 108 ರನ್'ಗಳಿಗೆ ತನ್ನೆಲ್ಲ ವಿಕೇಟ್'ಗಳನ್ನು ಕಳೆದುಕೊಂಡಿತು. ಲಿನ್,ರಾಣ ಬಿಟ್ಟರೆ ಉಳಿದವರ್ಯಾರು 20ರ ಗಡಿ ದಾಟಲಿಲ್ಲ. 

ಕೋಲ್ಕತ್ತಾ(ಮೇ.09): ಪ್ಲೇಆಫ್ ಹಂತನ್ನು ಪ್ರವೇಶಿಸಬೇಕೆನ್ನುವ ಗುರಿಯಲ್ಲಿರುವ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ  ವಿರುದ್ಧ 102 ರನ್ನುಗಳ ದಾಖಲೆ ಗೆಲುವು ಸಾಧಿಸಿದೆ.
ಮುಂಬೈ ನೀಡಿದ್ದ 210 ರನ್'ಗಳ ಸವಾಲಿಗೆ ಉತ್ತರವಾಗಿ ದಿನೆಶ್ ಕಾರ್ತಿಕ್ ನೇತೃತ್ವದ ಪಡೆ 108 ರನ್'ಗಳಿಗೆ ತನ್ನೆಲ್ಲ ವಿಕೇಟ್'ಗಳನ್ನು ಕಳೆದುಕೊಂಡಿತು. ಲಿನ್,ರಾಣ ಬಿಟ್ಟರೆ ಉಳಿದವರ್ಯಾರು 20ರ ಗಡಿ ದಾಟಲಿಲ್ಲ. ಹಾರ್ದಿಕ್ ಪಾಂಡ್ಯ 16/2, ಕೃನಾಲ್ ಪಾಂಡ್ಯ 12/2 ಸಹೋದರರ ದಾಳಿಗೆ ಸರ್ವ ಪತನಕಂಡರು.    
ಕಿಶನ್ ಭರ್ಜರಿ ಆಟ
ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮುಂಬೈ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಆರಂಭಿಕ ಆಟಗಾರರಾದ ಎಸ್.ಯಾದವ್ (36), ಲೆವಿಸ್ (18) ಔಟಾದರು. ನಾಯಕ ರೋಹಿತ್ ಶರ್ಮಾ(36), ವಿಕೇಟ್ ಕೀಪರ್ ಇಶಾನ್ ಕಿಶನ್ ಹಾಗೂ ಬೆನ್ ಕಟಿಂಗ್ ಸ್ಫೋಟಕ ಆಟದ ಪರಿಣಾಮ ಮುಂಬೈ ಇಂಡಿಯನ್ಸ್ ತಂಡ 20 ಓವರ್'ಗಳಲ್ಲಿ 210/6 ರನ್ ಪೇರಿಸಿದರು.
21 ಚಂಡುಗಳಲ್ಲಿ 62 ಬಾರಿಸಿದ ಕಿಶನ್ ಆಟದಲ್ಲಿ6 ಸಿಕ್ಸ್ ಹಾಗೂ 5 ಬೌಂಡರಿಗಳಿದ್ದವು. ಕಟ್ಟಿಂಗ್ ಕೂಡ 9 ಎಸೆತಗಳಲ್ಲಿ 3 ಸಿಕ್ಸ್' ಹಾಗೂ 1 ಬೌಂಡರಿ ಬಾರಿಸಿದರು. ಕೋಲ್ಕತ್ತಾ ಪರ ಪಿಯೂಶ್ ಚಾವ್ಲಾ 48/3 ವಿಕೇಟ್ ಪಡೆದರು.

ಸ್ಕೋರ್

ಮುಂಬೈ ಇಂಡಿಯನ್ಸ್  20 ಓವರ್'ಗಳಲ್ಲಿ 210/6
(ಕಿಶನ್ 62, ರೋಹಿತ್ 36, ಪಿಯೂಶ್ ಚಾವ್ಲಾ 48/3)

ಕೋಲ್ಕತ್ತಾ ನೈಟ್ ರೈಡರ್ಸ್ 18.1 ಓವರ್'ಗಳಲ್ಲಿ 108
(ರಣ 21,ಲಿನ್ 21, ಹಾರ್ದಿಕ್ ಪಾಂಡ್ಯ 16/2, ಕೃನಾಲ್ ಪಾಂಡ್ಯ 12/2  )

ಫಲಿತಾಂಶ: ಮುಂಬೈ'ಗೆ 102 ರನ್ ಜಯ

loader